
ನವದೆಹಲಿ : ಕಳೆದ ಜುಲೈ 19 ರಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದರೂ, ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ವಿನಾ ಕಾರಣ ಗೊಂದಲ ಎಬ್ಬಿಸಿದ್ದು, ಈ ಹಿನ್ನೆಲೆಯಲ್ಲಿ ಕಳೆದ 15 ದಿನ ಕಲಾಪದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಯಾವುದೇ ಕಲಾಪವನ್ನು ಶಾಂತಿಯುತವಾಗಿ ನಡೆಸಲು ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಿರಲಿಲ್ಲ. ಇದರಿಂದಾಗಿ ಸಂಭಾವ್ಯ 53 ಗಂಟೆಗಳ ಪೈಕಿ ರಾಜ್ಯಸಭೆ ಕೇವಲ 11 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದೆ ಮತ್ತು ಲೋಕಸಭೆಯಲ್ಲಿ ಸಂಭಾವ್ಯ 54 ಗಂಟೆಗಳಲ್ಲಿ ಕೇವಲ 7 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದೆ. ಸಂಸತ್ ಅಧಿವೇಶನದ 89 ಗಂಟೆ ವ್ಯರ್ಥವಾಗಿದ್ದು, ಸಾರ್ವಜನಿಕರ ತೆರಿಗೆಯ 133 ಕೋಟಿ ರೂ. ನಷ್ಟವಾಗಿದೆ ಎಂದು ಮೂಲಗಳು ಹೇಳಿವೆ.
ವಿಪಕ್ಷಗಳ ಈ ಅಸಹಕಾರದಿಂದ ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ. ಗಳಂತೆ ಹಲವು ಕೋಟಿ ರೂ. ನಷ್ಟವಾದಂತಾಗಿದೆ. ಈ ಅಧಿವೇಶನ ಕೇವಲ 14% ಗಳಷ್ಟು ಮಾತ್ರವೇ ಫಲಪ್ರದವಾಗಿತ್ತು ಎಂದು ಮೂಲಗಳು ಅಭಿಪ್ರಾಯ ಪಟ್ಟಿದೆ. ಈ ನಿರಂತರ ಗದ್ದಲದಿಂದಾಗಿ ಕೇವಲ 4 ಮಸೂದೆಗಳನ್ನಷ್ಟೇ ಮಂಡಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


