ಬಾಲಸೋರ್: ಒಡಿಶಾದ ಕರಾವಳಿಯ ಚಾಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ ಹೊಸ ತಲೆಮಾರಿನ ಆಕಾಶ್ ಎನ್ಜಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಡಿಆರ್ಡಿಒ ಮೂಲಗಳು ತಿಳಿಸಿವೆ.
ಈ ಕ್ಷಿಪಣಿಯು ರೇಡಿಯೋ ಫ್ರೀಕ್ವೆನ್ಸಿ ಅನ್ವೇಷಕ ವ್ಯವಸ್ಥೆ ಹೊಂದಿದ್ದು, ಅತಿ ವೇಗದ ಮಾನವ ರಹಿತ ವೈಮಾನಿಕ ಗುರಿಯನ್ನು ಯಶಸ್ವಿಯಾಗಿ ತಡೆದಿರುವುದಾಗಿ ಡಿಆರ್ಡಿಒ ಹೇಳಿದೆ. ಪರೀಕ್ಷೆ ಸಂದರ್ಭದಲ್ಲಿ ಕ್ಷಿಪಣಿಯು ವೇಗದ ಮತ್ತು ಚುರುಕಿನ ವೈಮಾನಿಕ ಬೆದರಿಕೆಗಳನ್ನು ತಟಸ್ಥಗೊಳಿಸಲು ಅಗತ್ಯವಾದ ಹೆಚ್ಚಿನ ಕುಶಲತೆ ಪ್ರದರ್ಶಿಸಿದೆ. ಇದು ಭಾರತೀಯ ವಾಯುಪಡೆಗೆ ಹೆಚ್ಚಿನ ಬಲ ತುಂಬುತ್ತದೆ ಎಂದು ಡಿಆರ್ಡಿಒ ಅಭಿಪ್ರಾಯ ವ್ಯಕ್ತಪಡಿಸಿದೆ.
ಎರಡುದ ದಿನಗಳ ಹಿಂದೆಯೂ ಚಾಂಡಿಪುರದ ಸಮೀಪದ ಐಟಿಆರ್ ಪರೀಕ್ಷಾ ನೆಲೆಯಲ್ಲಿ ಸರ್ಫೇಸ್ ಟು ಏರ್ ಆಕಾಶ್ ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆದಿತ್ತು. ಈ ಕ್ಷಿಪಣಿಯನ್ನು ಹೈದರಾಬಾದ್ನ ಡಿಆರ್ಡಿಎಲ್ ಮತ್ತು ಇತರ ಡಿಆರ್ಡಿಒಗಳ ಪ್ರಯೋಗಾಲಯಗಳ ಸಹಯೋಗದೊಂದಿಗೆ ಅಭಿವೃದ್ಧಿ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.