ನವದೆಹಲಿ: ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಇಂದು ಒಡಿಶಾ ಕರಾವಳಿಯ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಿಂದ ಆಕಾಶ್ ಎನ್ ಜಿ ಕ್ಷಿಪಣಿ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
ಮಲ್ಟಿಫಂಕ್ಷನ್ ರಾಡಾರ್, ಕಮಾಂಡ್, ಕಂಟ್ರೋಲ್, ಕಮ್ಯುನಿಕೇಶನ್ ಸಿಸ್ಟಮ್, ನಿರ್ವಹಣಾ ಸಂರಚನೆಯಲ್ಲಿ ಪಾಲ್ಗೊಳ್ಳುವ ಲಾಂಚರ್ನಂತಹ ಎಲ್ಲಾ ರೀತಿಯ ವೆಪನ್ ಸಿಸ್ಟಮ್ ವ್ಯವಸ್ಥೆಗಳನ್ನು ಒಳಗೊಂಡ ಲ್ಯಾಂಡ್ ಬೇಸ್ಡ್ ಪ್ಲ್ಯಾಟ್ಫಾರ್ಮ್ನಿಂದ ಈ ಪ್ರಯೋಗ ನಡೆಸಲಾಯಿತು.
ಡಿಆರ್ಡಿಒ ಜೊತೆಗೆ ಡಿಆರ್ಡಿಎಲ್ ಇದನ್ನು ಆಕಾಶ್ ಎನ್ಜಿ ಯನ್ನು ಅಭಿವೃದ್ಧಿ ಮಾಡಿದೆ. ಇದು ಫ್ಲೈಟ್ ಡಾಟಾವನ್ನು ಸೆರೆಹಿಡಿಯಲು, ಐಟಿಆರ್ ಎಲೆಕ್ಟ್ರೋ ಅಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಂ, ರಾಡಾರ್ ಮತ್ತು ಟೆಲಿಮೆಟ್ರಿಯಂತಹ ಹಲವಾರು ರೇಂಜರ್ ಕೇಂದ್ರಗಳನ್ನು ನಿಯೋಜಿಸಿದೆ. ಇದರಿಂದ ಸಂಪೂರ್ಣ ಹಾರಾಟದ ದತ್ತಾಂಶ, ದೋಷರಹಿತ ಕಾರ್ಯಕ್ಷಮತೆಯನ್ನು ದೃಢಪಡಿಸಲಾಗಿದೆ.
ಆಕಾಶ್ ಎನ್ಜಿ ಶಸ್ತ್ರಾಸ್ತ್ರ ವ್ಯವಸ್ಥೆಯು ಭಾರತೀಯ ವಾಯುಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇದು ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಆತ್ಮನಿರ್ಭರ ಕನಸಿಗೂ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
In a major boost to #AtmaNirbharBharat and strengthening Indian Army, Defence Research and Development Organisation (DRDO) successfully flight tested indigenously developed low weight, fire and forget Man Portable Antitank Guided Missile (MPATGM) today 21st July 2021. pic.twitter.com/kLEqrsgoOR
— DRDO (@DRDO_India) July 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.