ನವದೆಹಲಿ: ದೇಶದೆಲ್ಲೆಡೆ ಇಂದು ಮುಸ್ಲಿಮರ ಈದ್ ಉಲ್ ಅಧಾವನ್ನು ಆಚರಿಸಲಾಗುತ್ತಿದ್ದು, ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಭಕಾಮನೆಗಳನ್ನು ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈದ್ ಉದ್ ಅಧಾ ಹಬ್ಬದ ಶುಭಾಶಯಗಳು. ಸಾಮೂಹಿಕ ಅನುಭೂತಿ, ಸಾಮರಸ್ಯ, ಉತ್ತಮ ಸೇವೆಯಲ್ಲಿ ಸೇರ್ಪಡೆಗೊಳ್ಳುವಂತಹ ಮನೋಭಾವ ಹೆಚ್ಚಿಸಲಿ ಎಂದು ತಿಳಿಸಿದ್ದಾರೆ.
Eid Mubarak!
Best wishes on Eid-ul-Adha. May this day further the spirit of collective empathy, harmony and inclusivity in the service of greater good.
— Narendra Modi (@narendramodi) July 21, 2021
ರಾಷ್ಟ್ರಪತಿ ಕೋವಿಂದ್ ಅವರು ಉರ್ದು ಭಾಷೆಯಲ್ಲಿ ದೇಶದ ಮುಸಲ್ಮಾನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗೆಯೇ ಹಬ್ಬದ ಸಂದರ್ಭದಲ್ಲಿ ಕೊರೋನಾ ಮುಂಜಾಗ್ರತೆ, ಮಾರ್ಗಸೂಚಿಗಳನ್ನು ಅನುಸರಿಸುವಂತೆಯೂ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಭಾಶಯ ಕೋರಿದ್ದು, ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಪರಸ್ಪರ ಸಹೋದರತೆ, ಐಕ್ಯತೆಯನ್ನು ಮತ್ತಷ್ಟು ಬಲಪಡಿಸಲಿ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.