ನವದೆಹಲಿ: ಕೇಂದ್ರ ಸರ್ಕಾರದ ಕೊರೋನಾ ಲಸಿಕಾ ಅಭಿಯಾನದ ಮೂಲಕ ಕಳೆದ 24 ದಿನಗಳ ಅವಧಿಯಲ್ಲಿ 30 ರಿಂದ 40 ಕೋಟಿ ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಮಹತ್ವಾಕಾಂಕ್ಷಿ ವ್ಯಾಕ್ಸಿನೇಶನ್ ಅಭಿಯಾನ ನಿರಂತರವಾಗಿ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದೆ. ಎಲ್ಲರಿಗೂ ಲಸಿಕೆ ಅಭಿಯಾನದಿಂದ ಕೇವಲ 24 ದಿನಗಳಲ್ಲಿ 30 -40 ಕೋಟಿಗಳಷ್ಟು ಡೋಸ್ಗಳ ವಿತರಣೆಯ ಗುರಿ ಸಾಧಿಸಿದೆ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಮೊದಲ 10 ಕೋಟಿ ಡೋಸ್ ಲಸಿಕೆಗಳನ್ನು ಜನರಿಗೆ ತಲುಪಿಸಲು 85.ದಿನಗಳು ತಗುಲಿತ್ತು. ಆದರೆ ಲಸಿಕೆ ಸಾರ್ವತ್ರಿಕರಣ ಗೊಳಿಸುವ ಕೇಂದ್ರದ ನಿರ್ಧಾರದ ಬಳಿಕ ಕಳೆದ 24 ದಿನಗಳಲ್ಲಿ ಸುಮಾರು 40 ಕೋಟಿಗಳಷ್ಟು ಲಸಿಕೆ ವಿತರಣೆ ಮಾಡಲಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಲಸಿಕೆ ಲಭ್ಯವಾಗುವಂತೆ ಮಾಡಲು ಪೂರೈಕೆಯ ಸರಪಳಿಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.