ನವದೆಹಲಿ: ಮುಂಬರುವ ಲೋಕಸಭಾ ಅಧಿವೇಶನದಲ್ಲಿ ಕೆಳಮನೆಯಲ್ಲಿ ಪ್ರಸ್ತಾವನೆ ಸಲ್ಲಿಕೆ, ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 23 ಮಸೂದೆಗಳನ್ನು ಪಟ್ಟಿ ಮಾಡಿರುವುದಾಗಿ ಲೋಕಸಭಾ ಸಚಿವಾಲಯ ತಿಳಿಸಿದೆ.
ಪ್ರಸ್ತುತ ಅಸ್ತಿತ್ವದಲ್ಲಿರುವ 3 ಮಸೂದೆಗಳ ಸುಗ್ರೀವಾಜ್ಞೆಗಳನ್ನು ತಿದ್ದುಪಡಿ ಮಾಡುವುದು, 17 ಹೊಸ ಮಸೂದೆಗಳ ಇನ್ಸಾಲ್ವೆನ್ಸಿ, ಬ್ಯಾಂಕ್ರಪ್ಟ್ಸಿ ಕೋಡ್ (ತಿದ್ದುಪಡಿ) 2021 ಸೇರಿದಂತೆ ಕಳ್ಳಸಾಗಣೆ ತಡೆಗಟ್ಟುವಿಕೆ, ನಿರಾಶ್ರಿತರ ಪುನರ್ವಸತಿಗೆ ಸಂಬಂಧಿಸಿದಂತೆಯೂ ಮಸೂದೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.
ಕೊರೋನಾ ಸಂಕಷ್ಟ 2020 ರ ಬಜೆಟ್, ಮಾನ್ಸೂನ್ ಅಧಿವೇಶನಗಳ ಮೇಲೆಯೂ ಪರಿಣಾಮ ಬೀರಿತ್ತು. ಇದರಿಂದಾಗಿ ಸಂಸತ್ನ ಕಾರ್ಯ ಕಲಾಪಗಳಿಗೂ ಹೆಚ್ಚಿನ ಸಮಸ್ಯೆ ಉಂಟಾಗಿತ್ತು. ಈ ಬಾರಿಯ ಮಾನ್ಸೂನ್ ಅಧಿವೇಶನ ಜುಲೈ 19 ರಿಂದ ಆಗಸ್ಟ್ 13 ರ ವರೆಗೆ ನಡೆಯಲಿದೆ. ಕೊರೋನಾ ಮಾನದಂಡಗಳನ್ನು ಅನುಸರಿಸಿಕೊಂಡು 19 ದಿನಗಳ ಕಾಲ ಅಧಿವೇಶನಗಳು ಏಕಕಾಲಕ್ಕೆ ಉಭಯ ಸದನಗಳಲ್ಲಿ ಬೆಳಗ್ಗೆ 11 – ಸಂಜೆ 6 ರ ವರೆಗೆ ನಡೆಯಲಿರುವುದಾಗಿ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.