ಪಾಟ್ನಾ: ಕೊರೋನಾ ಸೋಂಕಿನಿಂದ ಮೃತಪಟ್ಟ ಸುಮಾರು 240 ರೋಗಿಗಳ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಿದ ಮುಖೇಶ್ ಹಿಸಾರಿಯಾ ಅವರಿಗೆ ಡೆಟಾಲ್ ಗೌರವ ಸಲ್ಲಿಸಿದೆ.
ಸುಮಾರು100 ಮಂದಿ 49 ವರ್ಷದ ಹಿಸಾರಿಯಾ ಅವರನ್ನು ಆಯ್ಕೆ ಮಾಡಿದ್ದು, ಅವರ ಚಿತ್ರವನ್ನು ಡೆಟಾಲ್ ಬಾಟಲ್ ಮೇಲೆ ಪ್ರಕಟಿಸಲಾಗಿದೆ. ಹಾಗೆಯೇ ಅವರ ಚಿತ್ರಕ್ಕೆ ಅಡಿಬರಹವಾಗಿ ‘ಸಂರಕ್ಷಕ’ ಎಂದು ಬರೆಯುವ ಮೂಲಕ ಡೆಟಾಲ್ ವಿಶೇಷ ಗೌರವ ಸಲ್ಲಿಸಿದ್ದಾರೆ. ಹಾಗೆಯೇ ಕೊರೋನಾ ವೈರಸ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದ ಹಿನ್ನಲೆಯಲ್ಲಿ ಈ ಗೌರವ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಹಿಸಾರಿಯಾ ಅವರು ರಾಜ್ಯದಲ್ಲಿ ಅನೇಕ ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ ಕೀರ್ತಿಯೂ ಇವರದಾಗಿದ್ದು, ಇವರನ್ನು ಬಿಹಾರದ ರಕ್ತದ ಮನುಷ್ಯ ಎಂದೂ ಜನರು ಗುರುತಿಸುತ್ತಾರೆ. ಹಾಗೆಯೇ ಕೊರೋನಾ ಒಂದನೇ ಅಲೆ ಸಂದರ್ಭದಲ್ಲಿ 96 ಜನರಿಗೆ ಮತ್ತು ಎರಡನೇ ಅಲೆಯಲ್ಲಿ 145 ಶವಗಳಿಗೆ ಸಂಸ್ಕಾರ ಮಾಡಲು ಅನುಕೂಲ ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ.
ಇವಿಷ್ಟೇ ಅಲ್ಲದೆ ಇವರು ಬಡ ಜನರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಮಕ್ಕಳಿಗೆ ಸಹ ಸೇವೆ ಒದಗಿಸುತ್ತಿದ್ದಾರೆ. ಬಡವರಿಗಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕವೂ ಅವರು ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.