ನವದೆಹಲಿ: ಮ್ಯಾನ್ಕೈಂಡ್ ಫಾರ್ಮಾ ಎಂಬ ಔಷಧ ತಯಾರಿಕಾ ಸಂಸ್ಥೆ ಯು ಕೊರೋನಾ ಚಿಕಿತ್ಸೆಗೆ ಬಳಕೆ ಮಾಡುವ ಓರಲ್ 2 ಡಿಯೋಕ್ಸಿ ಡಿ ಗ್ಲೂಕೋಸ್ (2-ಡಿಜಿ) ತಯಾರಿಸಲು ಮತ್ತು ಮಾರಾಟ ಮಾಡಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯಿಂದ ಪರವಾನಗಿ ಪಡೆದಿದೆ.
ಈ ಔಷಧವನ್ನು ಡಿಆರ್ಡಿಒ ಅಭಿವೃದ್ಧಿ ಮಾಡಿದೆ. ಹಾಗೆಯೇ ಡಾ. ರೆಡ್ಡೀಸ್ ಪ್ರಯೋಗಾಲಯಗಳ ಸಹಯೋಗದಲ್ಲಿ ಡಿಆರ್ಡಿಒ ನ ಲ್ಯಾಬ್ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ನ ಪ್ರಯೋಗಾಲಯದಲ್ಲಿ ಕ್ಲಿನಿಕಲ್ ಟ್ರಯಲ್ಗಳನ್ನು ನಡೆಸಿರುವುದಾಗಿ ಮ್ಯಾನ್ಕೈಂಡ್ ಫಾರ್ಮಾ ತಿಳಿಸಿದೆ.
ಈ ಔಷಧಿಯನ್ನು ಸಂಸ್ಥೆಯು ತನ್ನ ವಿಶಾಖಪಟ್ಟಣ ಮತ್ತು ಹಿಮಾಚಲ ಪ್ರದೇಶದ ಶಾಖೆಗಳಲ್ಲಿ ತಯಾರಿಸಲಿದೆ. ಈ ಔಷಧವು ಕೊರೋನಾ ರೋಗಿಗಳನ್ನು ಶೀಘ್ರ ಚೇತರಿಸುವಂತೆ ಮಾಡುವಲ್ಲಿ ಹೆಚ್ಚು ಶಕ್ತಿಶಾಲಿಯಾಗಿದ್ದು, ಆಕ್ಸಿಜನ್ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಸ್ಥೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.