ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಇದೀಗ ಟ್ವಿಟರ್ಗೆ ದೇಶೀಯ ಪರ್ಯಾಯ ಎನಿಸಿರುವ ಕೂ ಅಪ್ಲಿಕೇಶನ್ನಲ್ಲೂ ಅವರ ಫಾಲೋವರ್ಸ್ ಗಳ ಸಂಖ್ಯೆ 1 ಮಿಲಿಯನ್ಗೆ ತಲುಪಿದೆ.
ಯೋಗಿ ಆದಿತ್ಯನಾಥ್ ಅವರು ಕೂ ಖಾತೆಯನ್ನು ಫೆಬ್ರವರಿ 2021 ರಲ್ಲಿ ತೆರೆದಿದ್ದಾರೆ. ಕೇವಲ 4 ತಿಂಗಳಲ್ಲಿ ಅವರು 1 ಮಿಲಿಯನ್ ಹಿಂಬಾಲಕರನ್ನು ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.
ಈ ನಡುವೆ ಟ್ವಿಟರ್ ವೇದಿಕೆಯಲ್ಲಿ ಫಾಲೋವರ್ಸ್ಗಳ ಸಂಖ್ಯೆಯ ದೃಷ್ಟಿಯಿಂದ ಯುಪಿ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಹಿಂದಿಕ್ಕಿದ್ದಾರೆ.
ಅಖಿಲೇಶ್ ಯಾದವ್ ಜುಲೈ 2009 ರಲ್ಲಿ ಟ್ವಿಟ್ಟರ್ ಸೇರಿದ್ದರೆ, ಯೋಗಿ ಆದಿತ್ಯನಾಥ್ ಸೆಪ್ಟೆಂಬರ್ 2015 ರಲ್ಲಿ ಟ್ವಿಟ್ಟರ್ಗೆ ಬಂದಿದ್ದರು. ಪ್ರಸ್ತುತ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 47,000 ಅನುಯಾಯಿಗಳನ್ನು ಹೊಂದಿದ್ದು, ಟ್ವಿಟರ್ನಲ್ಲಿ ಅಖಿಲೇಶ್ ಯಾದವ್ ಅವರಿಗಿಂತ ಬಹಳ ಮುಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.