ನವದೆಹಲಿ: ಭಾರತೀಯ ನೌಕಾ ಹಡಗು ಐಎನ್ಎಸ್ ತಬರ್ ಜೂನ್ 13 ರಂದು ತನ್ನ ದೀರ್ಘಕಾಲದ ನಿಯೋಜನೆಯನ್ನು ಪ್ರಾರಂಭಿಸಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ಆಫ್ರಿಕಾ ಮತ್ತು ಯುರೋಪಿನ ಹಲವಾರು ಬಂದರುಗಳಿಗೆ ಭೇಟಿ ನೀಡಲಿದೆ.
ಈ ಸಂದರ್ಭದಲ್ಲಿ ಇದು ಮಿತ್ರ ದೇಶಗಳ ನೌಕಾಪಡೆಗಳೊಂದಿಗೆ ಹಲವಾರು ಜಂಟಿ ಸಮರಭ್ಯಾಸಗಳಲ್ಲಿ ಭಾಗವಹಿಸಲಿದೆ.
ಜಿಬೌಟಿ, ಈಜಿಪ್ಟ್, ಇಟಲಿ, ಫ್ರಾನ್ಸ್, ಯುಕೆ, ರಷ್ಯಾ, ನೆದರ್ಲ್ಯಾಂಡ್ಸ್, ಮೊರಾಕೊ, ಮತ್ತು ಆರ್ಕ್ಟಿಕ್ ಕೌನ್ಸಿಲ್ ದೇಶಗಳ ಬಂದರುಗಳಲ್ಲಿ ನಿಲುಗಡೆ ಹೊಂದುವ ಇದು, ಗಲ್ಫ್ ಆಫ್ ಅಡೆನ್, ರೆಡ್ ಸೀ, ಸೂಯೆಜ್ ಕಾಲುವೆ, ಮೆಡಿಟರೇನಿಯನ್ ಸಮುದ್ರ, ಉತ್ತರ ಸಮುದ್ರ ಮತ್ತು ಬಾಲ್ಟಿಕ್ ಸಮುದ್ರದಾದ್ಯಂತ ಸಾಗಲಿದೆ.
ಬಂದರು ಭೇಟಿಗಳ ಸಮಯದಲ್ಲಿ, ಮಿಲಿಟರಿ ಸಂಬಂಧಗಳನ್ನು ಬಲಪಡಿಸಲು, ಪರಸ್ಪರ ಕಾರ್ಯಸಾಧ್ಯತೆಯನ್ನು ಅಭಿವೃದ್ಧಿಪಡಿಸಲು ಮತ್ತು ದೀರ್ಘ-ಶ್ರೇಣಿಯ ಉಳಿವಿಗಾಗಿ ಯುಕೆ ರಾಯಲ್ ನೇವಿಯೊಂದಿಗೆ ಎಕ್ಸ್ ಕೊಂಕಣ, ಫ್ರೆಂಚ್ ನೌಕಾಪಡೆಯೊಂದಿಗೆ ಎಕ್ಸ್ ವರುಣ ಮತ್ತು ರಷ್ಯಾದ ಒಕ್ಕೂಟದ ನೌಕಾಪಡೆಯೊಂದಿಗೆ ಎಕ್ಸ್ ಇಂದ್ರನಂತಹ ದ್ವಿಪಕ್ಷೀಯ ಸಮರಭ್ಯಾಸಗಳಲ್ಲಿ ಹಡಗು ಭಾಗವಹಿಸಲಿದೆ.
ಇದು ಈ ಪ್ರದೇಶದಲ್ಲಿನ ಕಡಲ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಕಡಲ ಬೆದರಿಕೆಗಳ ವಿರುದ್ಧ ಸಂಯೋಜಿತ ಕಾರ್ಯಾಚರಣೆಯನ್ನು ಕ್ರೋಢಿಕರಿಸುವ ಗುರಿಯನ್ನು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.