ಜಮ್ಮು: ಜಮ್ಮು ಪ್ರದೇಶದ ಪ್ರತಿ ಕುಟುಂಬವು ದಿನದ 24 ಗಂಟೆಯೂ ವಿದ್ಯುತ್ ಪಡೆಯಲಿ ಎಂಬ ಕಾರಣಕ್ಕೆ ಜಮ್ಮು ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ (ಜೆಪಿಡಿಸಿಎಲ್) ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಜಮ್ಮುವಿನಲ್ಲಿ ಹಲವಾರು ಹೊಸ ಪವರ್ ಸ್ಟೇಶನ್ ನಿರ್ಮಿಸುತ್ತಿದೆ.
2012 ರ ಹಳೆಯ ವಿದ್ಯುತ್ ಮೂಲಸೌಕರ್ಯಗಳು ಪ್ರಸ್ತುತ ಇರುವ ಪವರ್ ಸ್ಟೇಶನ್ಗಳಲ್ಲಿ ಓವರ್ ಲೋಡ್ ಸೃಷ್ಟಿ ಮಾಡುತ್ತಿವೆ ಮತ್ತು ವಿದ್ಯುತ್ ಬೇಡಿಕೆಯನ್ನು ಪೂರೈಸಲು ಅಸಮರ್ಪಕವಾಗಿದೆ ಎಂದು ವಿವರಿಸಿದ ಜೆಪಿಡಿಸಿಎಲ್ ಅಧ್ಯಕ್ಷ ಜಗಮೋಹನ್ ಶರ್ಮಾ, ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಸಹಾಯದಿಂದ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ನಿಗಮವು ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
“ನಾವು ಪ್ರಸರಣ ಮತ್ತು ವಿತರಣಾ ಜಾಲಗಳನ್ನು ಬಲಪಡಿಸುತ್ತಿದ್ದೇವೆ. ಇದಕ್ಕಾಗಿ ಜಮ್ಮುವಿನ ಬೆರ್ನ್ ವಿದ್ಯುತ್ ಕೇಂದ್ರಕ್ಕೆ 160 ಎಂವಿಎ ಟ್ರಾನ್ಸ್ಫಾರ್ಮರ್, ಜೆಲಾಡ್ನಿ ವಿದ್ಯುತ್ ಕೇಂದ್ರಕ್ಕೆ 20 ಎಂವಿಎ ಮತ್ತು ಕೇನಲ್ ವಿದ್ಯುತ್ ಕೇಂದ್ರಕ್ಕೆ 20 ಎಂವಿಎ ಟ್ರಾನ್ಸ್ಫಾರ್ಮರ್ ಅನ್ನು ಸೇರಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಗಂಗ್ಯಾಲ್ನಲ್ಲಿ 20 ಎಂವಿಎ ವಿದ್ಯುತ್ ಕೇಂದ್ರ, ಬಿರ್ಪುರದಲ್ಲಿ 20 ಎಂವಿಎ, ಕೇನಲ್ -2 ವಿದ್ಯುತ್ ಕೇಂದ್ರಗಳಲ್ಲಿ 20 ಎಂವಿಎ ಪವರ್ ಸ್ಟೇಶನ್ ನಿರ್ಮಾಣವಾಗಲಿದೆ ಮತ್ತು ಚಕ್ ಬಲ್ವಾಲ್, ಉದಯವಾಲ್ಲಾ ಮತ್ತು ಶಹಜಾದ್ಪುರಗಳಲ್ಲಿ ವಿದ್ಯುತ್ ಕೇಂದ್ರಗಳು ಬರಲಿವೆ. ಆದ್ದರಿಂದ, ಸುಮಾರು 15 ರಿಂದ ಪ್ರಸ್ತುತ ನೆಟ್ವರ್ಕ್ಗೆ 20 ಹೊಸ ವಿದ್ಯುತ್ ಕೇಂದ್ರಗಳನ್ನು ಸೇರಿಸಲಾಗುತ್ತಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸುಗಮ ಕಾರ್ಯನಿರ್ವಹಣೆಯನ್ನು ಉತ್ತೇಜಿಸಲು ಜನವರಿಯಿಂದ ಆರು ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
“ಈ ಪ್ರದೇಶದ ನಿವಾಸಿಗಳು ಸರ್ಕಾರದ ಉಪಕ್ರಮದ ಬಗ್ಗೆ ಸಂತೋಷಪಟ್ಟಿದ್ದಾರೆ. ಇಂದಿನ ಜಗತ್ತಿನಲ್ಲಿ ಬಹುತೇಕ ಎಲ್ಲದಕ್ಕೂ ವಿದ್ಯುತ್ ಅಗತ್ಯವಿದೆ, ಮತ್ತು ಸರ್ಕಾರದ ಈ ಯೋಜನೆಯ ಮೂಲಕ ನಮಗೆ 24×7 ವಿದ್ಯುತ್ ಸಿಕ್ಕಿದರೆ ಅದು ಅಭಿವೃದ್ಧಿಗೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.