News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈ ಯುವ ವಿಜ್ಞಾನಿಗೆ ಆರ್ಥಿಕ ನೆರವು ಬೇಕಾಗಿದೆ

Kundapur NEWSಕೋಟ: ಸಮೀಪದ ಮಣೂರು ಪಡುಕರೆಯ ಸಂತೋಷ ದೇವಾಡಿಗ ಗ್ರಾಮೀಣ ಪ್ರದೇಶದ ಯುವ ವಿಜ್ಞಾನಿಯಾಗಿ ತೆರೆ ಮರೆಯಲ್ಲಿ ಹಲವು ಹೊಸ, ಹೊಸ ಸಂಶೋಧನೆಯನ್ನು ಮಾಡುವ ಪ್ರತಿಭಾವಂತ ಯುವಕ. ಈ ಪ್ರತಿಭಾವಂತ ಯುವಕ ತನ್ನ ಕಲಾಚಾತುರ್ಯದಿಂದ ಅನೇಕ ಮಾದರಿಗಳನ್ನು ತಯಾರಿಸಿ ವಿಜ್ಞಾನಿಗಳೇ ಚಿಂತಿಸುವಂತೆ ಮಾಡಿ ಎಲ್ಲರ ಗಮನ ಸೆಳೆಯುತ್ತಿದಾನೆ.

ಸ್ಮೋಕ್ ಡಿಟೆಕ್ಟರ್, ಡೋರ್ ಸೆನ್ಸಾರ್, ಇಎಲ್‌ಸಿಬಿ, ಎಂಸಿಬಿ ಡಿಟೆಕ್ಟರ್, ಬೇಬಿ ಕ್ರೈಯಿಂಗ್ ಡಿಟೆಕ್ಟರ್ ಮೊದಲಾದ ಹೊಸ ಹೊಸ ಮಾದರಿಗಳನ್ನು ಸೃಷ್ಠಿಸಿದ್ದು, ಸಂತೋಷ್ ಅವರ ಬುದ್ದಿ ಮತ್ತೆಗೆ ಸಾಕ್ಷಿಯಾಗಿ ನಿಂತಿದೆ. ಮಣೂರು ಪಡುಕರೆ ಪ್ರೌಢಶಾಲೆಯಲ್ಲಿ ೧೦ನೇ ತರಗತಿಯನ್ನು ಪೊರೈಸಿದ ಸಂತೋಷ್‌ಗೆ ಆರ್ಥಿಕ ಸಮಸ್ಯೆಯಿಂದ ಶಾಲೆ ಬಿಡಬೇಕಾಗಿ ಬಂತು. ತದ ನಂತರ ಹೊಟ್ಟೆ ಪಾಡಿಗಾಗಿ ಬೆಳಗಾವಿಯಲ್ಲಿ ಬೀಡಾ ಅಂಗಡಿಯಲ್ಲಿ ಒಂದುವರೆ ವರ್ಷಗಳ ಕಾಲ ಕೆಲಸ ಮಾಡಿದರು. ಪುನಃ ಊರಿಗೆ ಆಗಮಿಸಿದ ಇವರು ಇದೀಗ ಮಣೂರು ಪಡುಕರೆಯ ಜನತಾ ಫಿಶ್ ಮಿಲ್‌ನಲ್ಲಿ ಆಪರೇಟರ್ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅಂದು ಇವರ ತಂದೆ ದಿವಂಗತ ಲಕ್ಷ್ಮಣ ದೇವಾಡಿಗ ಹಾಳಾದ ಎಲೆಕ್ಟ್ರಿಕಲ್ ವಸ್ತುಗಳನ್ನು ರಿಪೇರಿ ಮಾಡುತ್ತಿದ್ದನ್ನು, ಸಂತೋಷ ಸದಾ ನೋಡಿಕೊಳ್ಳುತ್ತಿದ್ದರು. ಇದೇ ಸಂತೋಷರಿಗೆ ಹೊಸ ಹೊಸ ಸಂಶೋಧನೆಯ ಐಡಿಯಾಗಳು ರೂಪಗೊಳ್ಳಲು ಪ್ರೇರಣೆಯಾಯಿತು.

ಮನೆ ಅಥವ ಕಂಪೆನಿಗಳಿಗೆ ಬೆಂಕಿ ಹೊತ್ತಿಕೊಂಡರೆ ಅಗ್ನಿಶಾಮುಕ ದಳಕ್ಕೆ ಕೂಡಲೇ ಸಂದೇಶ ರವಾನೆಯಾಗುತ್ತದೆ. ತದನಂತರ 30 ಸೆಕೆಂಡ್‌ನಲ್ಲಿ ಮಾಲೀಕರಿಗೆ ಕರೆ ಹೋಗುತ್ತದೆ. ಅಲ್ಲದೇ ಅಗ್ನಿ ದುರಂತ ಸಂಭವಿಸಿದ ಸ್ಥಳದಲ್ಲಿ ಸೈರನ್ ಹೊಡೆಯುತ್ತದೆ. ಇದರ ಜತೆಗೆ ಅಗ್ನಿ ಶಾಮುಕ ದಳಕ್ಕೆ ಅಗ್ನಿ ದುರಂತ ನಡೆದ ಸ್ಥಳದ ಬಗ್ಗೆ ಪೂರ್ಣ ವಿಳಾಸ, ಭಾವಚಿತ್ರ ಹಾಗೂ ಗೂಗಲ್ ಲೈವ್ ರೋಡ್ ಮ್ಯಾಪ್ ಸಿಗುತ್ತದೆ. ಇದಾದ ಬಳಿಕ ಅಗ್ನಿ ಶಾಮುಕ ದಳದ ವಾಹನದಿಂದ ಬೆಂಕಿ ದುರಂತ ನಡೆದ ಸ್ಥಳಕ್ಕೆ ಎಷ್ಟು ಕಿಲೋಮೀಟರ್ ಇದೆ ಹಾಗೂ ಎಷ್ಟು ಗಂಟೆಯ ಒಳಗೆ ಆ ಸ್ಥಳಕ್ಕೆ ತಲುಪ ಬಹುದು ಎನ್ನುವುದನ್ನು ಸಂಪೂರ್ಣ ಮಾಹಿತಿಯನ್ನು ಸಹ ನೀಡಲಾಗುತ್ತದೆ.

ಆದರೆ ಸ್ಮೋಕ್ ಡಿಟೆಕ್ಟರ್ ಅಳವಡಿಸಿದ ಮನೆ ಅಥವಾ ಕಂಪೆನಿಯ ಮಾಲೀಕರು ತಮ್ಮಲ್ಲಿ ಸ್ಮೋಕ್ ಡಿಟೆಕ್ಟರ್ ಅಳವಡಿಸಿದ ಬಗ್ಗೆ ಅಗ್ನಿ ಶಾಮುಕ ದಳಕ್ಕೆ ಮೊದಲೇ ವಿವರವಾದ ಮಾಹಿತಿಯನ್ನು ತಿಳಿಸಬೇಕಾಗಿದೆ.

ಡೋರ್ ಸೆನ್ಸಾರ್: ಇದು ಮನೆ ಅಥವಾ ಕಂಪೆನಿಗೆ ಕಳ್ಳರು ನುಗ್ಗಿದಾಗ ಅದರ ಮಾಲೀಕರಿಗೆ ಕರೆಯನ್ನು ನೀಡುವ ಸಾಧನವಾಗಿದೆ. ಅಲ್ಲದೇ ಪಕ್ಕದ ಮನೆಯವರಿಗೂ ಕೂಡ ಘಟನೆ ನಡೆದ ತಕ್ಷಣ ಕರೆಯನ್ನು ನೀಡಲಾಗುತ್ತದೆ. ಕಳ್ಳರು ನುಗ್ಗಿದ ಸ್ಥಳದ ಸುತ್ತ ಮುತ್ತ ದೊಡ್ಡ ಮಟ್ಟದ ಸೈರನ್ ಮೊಳಗುತ್ತದೆ. ಈ ಸೆನ್ಸಾರ್‌ನ್ನು ಎಟಿಎಂ, ಲಾಕರ್‌ಗಳಿಗೂ ಸಹ ಉಪಯೋಗಿಸುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ.

ಇಎಲ್‌ಸಿಬಿ ಡಿಟೆಕ್ಟರ್: ಈ ಸೆನ್ಸಾರನ ಮೂಲಕ ಕಟ್ಟಡದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಗೆ ಶಾಕ್ ಹೊಡೆದರೆ ಮೊದಲು ಪವರ್ ಕಟ್ ಆಗುತ್ತದೆ. ಅದಾದ ಬಳಿಕ ವ್ಯಕ್ತಿಗೆ ಶಾಕ್ ಹೊಡೆದಿರುವ ಮಾಹಿತಿಯನ್ನು ಅಲ್ಲಿನ ಮೈನ್ ಎಲೆಕ್ಟ್ರಿಶನ್‌ಗೆ ಫೋನ್ ಕರೆಯ ಮೂಲಕ ಮಾಹಿತಿ ನೀಡುತ್ತದೆ. ವ್ಯಕ್ತಿಗೆ ಶಾಕ್ ಹೊಡೆದ ತಕ್ಷಣ ಮೈನ್ ಫೆನಾಲ್ ಬೋರ್ಡ್‌ನಲ್ಲಿ ದೊಡ್ಡ ಮಟ್ಟದ ಎಲೆಕ್ಟ್ರಿಕಲ್ ಸೈರನ್ತಾಗುತ್ತದೆ.

ಎಂಸಿಬಿ ಡಿಟೆಕ್ಟರ್: ಇದೂ ಸಹ ಮನೆ ಹಾಗೂ ಕಂಪೆನಿಗೆ ಬಳಸ ಬಹುದಾದ ಸಾಧನವಾಗಿದೆ. ಇದರ ಪ್ರಮುಖ ಕಾರ್ಯವೆಂದರೆ ಮನೆ ಅಥವಾ ಕಂಪೆನಿಯ ಯಾವುದೇ ಮೂಲೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆದಾಗ ಪವರ್ ಕಟ್ ಆಫ್ ಮಾಡುವುದಲ್ಲದೇ ಶಾರ್ಟ್ ಸರ್ಕ್ಯೂಟ್ ಆದ ಮಾಹಿತಿಯನ್ನು ಸಹ ಫೋನ್‌ನ ಮೂಲಕ ತಿಳಿಯಪಡಿಸುತ್ತದೆ. ಶಾರ್ಟ್ ಸಕ್ಯೂಟ್ ಆದ ತಕ್ಷಣ ಮೈನ್ ಫೆನಾಲ್ ಬೋರ್ಡ್‌ನಲ್ಲಿ ದೊಡ್ಡ ಮಟ್ಟದ ಸೈರನ್ ಮೊಳಗುತ್ತದೆ.

ಬೇಬಿ ಕ್ರೈಯಿಂಗ್ ಡಿಟೆಕ್ಟರ್: ಮಗುವಿನ ತಾಯಿ ಮಗೆಲಸದಲ್ಲಿ, ಇನ್ನಿತರ ಕೆಲಸದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಮಗು ಅತ್ತರೆ ಸೈರನ್ ಮೂಲಕ ಮಗುವಿನ ತಾಯಿಗೆ ಪೋನಿನಲ್ಲಿ ಸಂದೇಶ ರವಾನೆಯಾಗುತ್ತದೆ. ಅದಲ್ಲದೇ ಐದು ನಿಮಿಷಗಳ ತನಕ ಮಗು ಮಲಗಿರುವ ಎಲೆಕ್ಟ್ರೋ ರೋಬೋಟಿಕ್ ತೊಟ್ಟಿಲು ಸಹ ತೂಗುತ್ತದೆ. ಈ ಎಲ್ಲಾ ಹೊಸ ಹೊಸ ಸಂಶೋಧನೆಯ ಜತೆಗೆ ಇನ್ನೂ ಹತ್ತು ಹಲವು ನವ ನವೀನತೆಯ ಆವಿಷ್ಕಾರಗಳು ಸಂತೋಷ ದೇವಾಡಿಗರಲ್ಲಿ ಅಡಗಿದೆ.

ಈ ಹೊಸ ಹೊಸ ಐಡಿಯಾಗಳ ಸಂಶೋಧನೆಯನ್ನು ಮಾಡಲು ಇಲ್ಲಿಯವರೆಗೆ ಸುಮಾರು ೨೦ಕ್ಕೂ ಅಧಿಕ ಮೊಬೈಲ್‌ಗಳನ್ನು ಬಳಸಿಕೊಳ್ಳಲಾಗಿದೆ. ಸುಮಾರು 25 ಸಾವರಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ. ಕೈಯಲ್ಲಿ ಹಣವಿಲ್ಲದಿದ್ದರೂ ಸಹ ತನ್ನ ಸಂಶೋಧನೆಗೆ ಗೆಳೆಯರು ಸಹಕಾರ ನೀಡಿದ್ದಾರೆ. ತಾಯಿ ಅಲ್ಲೋ ಇಲ್ಲೋ ಕೂಲಿ ಕೆಲಸ ಮಾಡಿ ಮಗನ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅಗತ್ಯವಿದ್ದಲ್ಲಿ ನೀವು ಸಹ ಈತ ತಯಾರಿಸಿದ ಸಂಶೋಧನೆಯನ್ನು ಮನೆ ಅಥವಾ ಕಂಪೆನಿಗೆ ಅಳವಡಿಸಿ, ಮುಂದಾಗುವ ಅನಾಹುತವನ್ನು ತಪ್ಪಿಸಿಕೊಳ್ಳಬಹುದಾಗಿದೆ.

ಸರಿಯಾದ ಪ್ರೋತ್ಸಾಹ ಸಿಕ್ಕಿದಲ್ಲಿ ಇನ್ನಷ್ಟು ಹೊಸ ಹೊಸ ಸಂಶೋಧನೆಗಳನ್ನು ಮಾಡುವ ಚಿಂತನೆ ಸಂತೋಷ್ ಅವರದ್ದಾಗಿದೆ..

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top