ಮೈಸೂರು: ಮನೆಯಲ್ಲಿಯೇ ಕೊರೋನಾ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಕೆ ಎಸ್ ರಂಗಪ್ಪ ನೇತೃತ್ವದಲ್ಲಿ ರ್ಯಾಪಿಡ್ ಡಿಟೆಕ್ಷನ್ ಟೆಸ್ಟ್ ಕಿಟ್ ಅನ್ನು ಅಭಿವೃದ್ಧಿ ಮಾಡಲಾಗಿದೆ.
ಈ ಕಿಟ್ ನ ಮೂಲಕ ಈಗಾಗಲೇ ನೂರಾರು ಜನರ ಕೊರೋನಾ ಟೆಸ್ಟ್ ನಡೆಸಲಾಗಿದ್ದು, ಕೊರೋನಾ ಸೋಂಕು ಪತ್ತೆಯಲ್ಲಿ ಇದು 90% ಗಳಷ್ಟು ಯಶಸ್ಸು ಗಳಿಸಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗೆ ಕಳುಹಿಸಲಾಗುತ್ತಿದ್ದು, ಅಲ್ಲಿಂದ ಅನುಮೋದನೆ ಸಿಕ್ಕ ತಕ್ಷಣವೇ ಮಾರುಕಟ್ಟೆಗೆ ಬಿಡಲಾಗುತ್ತದೆ ಎಂದು ರಂಗಪ್ಪ ತಿಳಿಸಿದ್ದಾರೆ. 100 ರೂ. ಗಳಲ್ಲಿ ಈ ಕಿಟ್ ದೊರೆಯುವಂತೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಲಾರ್ವೆನ್ ಬಯೋಲಾಜಿಕಲ್ಸ್ ಕಂಪೆನಿ ಹೈದರಾಬಾದ್ನ ಸಹಯೋಗದಲ್ಲಿ ಈ ಕಿಟ್ ಅನ್ನು ವಿವಿಯ ಮೂವರು ವಿಜ್ಞಾನಿಗಳು ಅಭಿವೃದ್ಧಿ ಮಾಡಿದ್ದಾರೆ. ವಿಜ್ಞಾನ ಭವನದ ಸಂಚಾಲಕ ಪ್ರೊ ಎಸ್ ಚಂದ್ರ ನಾಯಕ್ ಮತ್ತು ಅಣುಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಸಿ ಡಿ ಮೋಹನ್ ಅವರೂ ಈ ಸಂಶೋಧನೆಯಲ್ಲಿ ಪಾಲು ಪಡೆದಿದ್ದಾರೆ. ಈ ಸಂಶೋಧನೆಗೆ ವಿವಿಯ ಕುಲಪತಿ ಪ್ರೊ ಜಿ ಹೇಮಂತ್ ಕುಮಾರ್ ಅವರು ಸಕಲ ರೀತಿಯ ನೆರವು, ಅನುಕೂಲಗಳನ್ನು ಒದಗಿಸಿ ಕೊಟ್ಟಿದ್ದಾರೆ.
ಒಂದು ವರ್ಷದ ಶ್ರಮದ ಪರಿಣಾಮ ಈ ಕಿಟ್ ತಯಾರಾಗಿದೆ. ಇದರಲ್ಲಿ ಕೊರೋನಾ ರೂಪಾಂತರ ವೈರಸ್ಗಳನ್ನು ನಿಖರವಾಗಿ ಪತ್ತೆ ಮಾಡಬಹುದು. ಗಂಟಲು ಮತ್ತು ಮೂಗಿನ ದ್ರವ ಬಳಸಿ ಮನೆಯಲ್ಲಿಯೇ ಈ ಪರೀಕ್ಷೆ ನಡೆಸಲು ಇದು ಅನುಕೂಲ ಒದಗಿಸುತ್ತದೆ. 10 ನಿಮಿಷಗಳಲ್ಲಿ ಇದರ ಮೂಲಕ ಫಲಿತಾಂಶ ಪಡೆಯಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.