https://chat.whatsapp.com/BKucwX3HbX4J90X4VL22yG
News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ಆಯುಷ್ ಕ್ಲಿನಿಕಲ್ ಕೇಸ್ ರೆಪೊಸಿಟರಿ ಪೋರ್ಟಲ್‌ಗೆ ಇಂದು ಚಾಲನೆ

ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜ್ಜು ಅವರು ಆಯುಷ್ ಕ್ಲಿನಿಕಲ್ ಕೇಸ್ ರೆಪೊಸಿಟರಿ ಪೋರ್ಟಲ್ ಮತ್ತು ಆಯುಷ್ ಸಂಜೀವನಿ ಆ್ಯಪ್‌ನ ಮೂರನೇ ಆವೃತ್ತಿಯನ್ನು ಇಂದು ವರ್ಚುವಲ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದ್ದಾರೆ. ಆಯುಷ್ ಕ್ಲಿನಿಕಲ್ ರೆಪೊಸಿಟರಿ ಪೋರ್ಟಲ್ ಆಯುಷ್ ವೈದ್ಯರು ಮತ್ತು ಸಾರ್ವಜನಿಕರಿಗೆ ಬೆಂಬಲ ನೀಡುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ಪೋರ್ಟಲ್ ಆಯುಷ್ ವೈದ್ಯರು ದೊಡ್ಡ ಪ್ರಮಾಣದಲ್ಲಿ ಸಾಧಿಸಿದ ಕ್ಲಿನಿಕಲ್ ಫಲಿತಾಂಶಗಳ ಬಗ್ಗೆ ಮಾಹಿತಿಯನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಇದು ವೈದ್ಯ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಆಯುಷ್‌ನ  ವೈಜ್ಞಾನಿಕ ನೆಲೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

ಆಯುಷ್ ಸಂಜೀವನಿ ಆ್ಯಪ್‌ನ ಮೂರನೇ ಆವೃತ್ತಿಯು ಆಯುಷ್ -64 ಮತ್ತು ಕಬಾಸುರಾ ಕುಡಿನೀರ್ ಔಷಧಿಗಳನ್ನು ಒಳಗೊಂಡಂತೆ ಆಯ್ದ ಆಯುಷ್ ಮಧ್ಯಸ್ಥಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಮಹತ್ವದ ಅಧ್ಯಯನ ಮತ್ತು ದಾಖಲಾತಿಗಳನ್ನು ಸುಗಮಗೊಳಿಸುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top