https://chat.whatsapp.com/BKucwX3HbX4J90X4VL22yG
News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ದೃಢ ಸಂಕಲ್ಪದಿಂದ ಕೊರೋನಾ ಬಿಕ್ಕಟ್ಟನ್ನು ಎದುರಿಸೋಣ: ಸಾಧ್ವಿ ಋತುಂಬರಾ

ನವದೆಹಲಿ:  ‘ಹಮ್ ಜೀತೇಂಗೆ – ಪಾಸಿಟಿವಿಟಿ ಅನ್‌ಲಿಮಿಟೆಡ್’ ಉಪನ್ಯಾಸ ಸರಣಿಯ ನಾಲ್ಕನೇ ದಿನವಾದ ಇಂದು ಸಾಧ್ವಿ ಋತುಂಬರಾ ಜಿ- ವಾತ್ಸಲ್ಯ ಗ್ರಾಮ ಮತ್ತು ಸಂತ ಜ್ಞಾನ್ ದೇವಜಿ ಮಹರಾಜ್‌ – ಶ್ರೀ ಪಂಚಾಯತಿ ಅಖರಾ ನಿರ್ಮಲ್ ಅವರು ಮಾತನಾಡಿ, ಶ್ರೀಮಂತ ಆಧ್ಯಾತ್ಮಿಕ ಸಂಪ್ರದಾಯವನ್ನು ಅಳವಡಿಸುವಂತೆ ಭಾರತೀಯ ಸಮಾಜಕ್ಕೆ ಕರೆ ನೀಡಿದರು.

ಕರೋನಾ ಬಿಕ್ಕಟ್ಟನ್ನು ನಿವಾರಿಸಲು ನಮ್ಮ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಬೇಕು, ಅನಾನುಕೂಲಕರ ಪರಿಸ್ಥಿತಿಗಳಲ್ಲಿ ಅಸಹಾಯಕರೆಂದು ಭಾವಿಸುವ ಬದಲು, ದೃಢವಾದ ಮನಸ್ಸಿನಿಂದ ಸಂಕಲ್ಪವನ್ನು ತೆಗೆದುಕೊಂಡಾಗ ಮಾತ್ರ ಈ ಸವಾಲನ್ನು ನಿವಾರಿಸಬಹುದು ಇಬ್ಬರು ಗಣ್ಯರು ಪ್ರತಿಪಾದಿಸಿದರು. ಈ ಐದು ದಿನಗಳ ಉಪನ್ಯಾಸ ಸರಣಿಯನ್ನು ‘ಕೋವಿಡ್ ರೆಸ್ಪಾನ್ಸ್ ಟೀಮ್’ ಆಯೋಜಿಸಿದೆ, ಇದು ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿತ್ವವನ್ನು ಹೊಂದಿದೆ.

ಸಾಧ್ವಿ ರಿಥಂಬರ ಅವರು ಮಾತನಾಡಿ, “ಪ್ರತಿಕೂಲ ಸನ್ನಿವೇಶಗಳಡಿ ಸಮಾಜದ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಪ್ರಸ್ತುತ ಉದ್ಭವಿಸಿರುವ ಪ್ರತಿಕೂಲ ಸನ್ನಿವೇಶದಲ್ಲಿ ನಮ್ಮ ಸಂಪೂರ್ಣ ದೇಶ ಭಯಾನಕ ಸಾಂಕ್ರಾಮಿಕದೊಂದಿಗೆ ಹೋರಾಟ ನಡೆಸುತ್ತಿದೆ, ಇದು ನಾವು ನಮ್ಮ ಆಂತರಿಕ ಸಾಮರ್ಥ್ಯವನ್ನು ಜಾಗೃತಗೊಳಿಸುವ ಸಂದರ್ಭ. ಧೈರ್ಯ ಮತ್ತು ದೃಢ ನಿಶ್ಚಯವಿದ್ದರೆ ದೊಡ್ಡ ಪರ್ವತವನ್ನೂ ಕೂಡ ಅನುಕರಿಸಬಹುದು. ನದಿಗೆ ಹರಿಯುವಾಗ, ದೊಡ್ಡ ದೊಡ್ಡ ಬಂಡೆ ಕಲ್ಲನ್ನು ಮರಳಾಗಿ ಪರಿವರ್ತಿಸುವ ಸಾಮರ್ಥ್ಯ ಇರುತ್ತದೆ. ಹೀಗಾಗಿ ಸವಾಲಿನ ಸನ್ನಿವೇಶಗಳಲ್ಲಿ ಅಸಹಾಯಕ ಭಾವನೆ ಹೊಂದುವುದು ಬಿಕ್ಕಟ್ಟಿಗೆ ಪರಿಹಾರವಲ್ಲ, ಸವಾಲನ್ನು ಎದುರಿಸಲು ನಾವು ನಮ್ಮ ಆಂತರಿಕ ಸಾಮರ್ಥ್ಯವನ್ನು ಜಾಗೃತಗೊಳಿಸಬೇಕು. ಪ್ರತಿ ಬಿಕ್ಕಟ್ಟಿಗೆ ಪರಿಹಾರ ಇರುತ್ತದೆ, ಆದರೆ ಈ ಪರಿಹಾರ ನಿಮ್ಮನ್ನು ನೀವು ನಂಬಿದಾಗ ಮತ್ತು ದೇವರ ಮೇಲೆ ವಿಶ್ವಾಸವಿಟ್ಟಾಗ ಮಾತ್ರ ಸಿಗುತ್ತದೆ. ನಂಬಿಕೆ ಮತ್ತು ಭರವಸೆ ಮೂಲಕ ನಾವು ಈ ಸಾಂಕ್ರಾಮಿಕದಿಂದ ಹೊರಬರಬಹುದು. ಪರಸ್ಪರ ಆರೋಪ ಮಾಡುವ ಬದಲು ಆತ್ಮವಿಶ್ವಾಸವನ್ನು, ಆತ್ಮಸಂಯಮ ಮತ್ತು ಸ್ವ ನಿರ್ಣಯವನ್ನು ಜಾಗೃತಗೊಳಿಸಬೇಕು. ಪ್ರಸ್ತುತ ಪರಿಸ್ಥಿತಿಯ ನಡುವೆ, ನಿಮ್ಮ ಸಾಮರ್ಥ್ಯವನ್ನು ಕೇವಲ ನಕಾರಾತ್ಮಕ ಚಿಂತನೆ ಗಾಗಿ ಬಳಸಿದರೆ, ಹೊಸದನ್ನು ಮಾಡುವ ಮತ್ತು ಹೊಸದನ್ನು ಚಿಂತಿಸುವ ಸಾಮರ್ಥ್ಯ ಮರೆಯಾಗುತ್ತದೆ” ಎಂದರು.

ಸಂತ ಜ್ಞಾನ್ ದೇವಜಿ ಮಹರಾಜ್‌ ಅವರು ಮಾತನಾಡಿ, “ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಜಗತ್ತಿನಲ್ಲಿ ಬದಲಾಗದ್ದು ಯಾವುದು ಇಲ್ಲ. ನಮ್ಮನ್ನು ಆವರಿಸಿರುವ ಬೇಸರ ದೀರ್ಘಕಾಲ ಉಳಿಯುವುದಿಲ್ಲ, ಅದು ದೂರವಾಗುತ್ತದೆ ಮತ್ತು ದೂರವಾಗಲೇಬೇಕು. ಆತಂಕಕ್ಕೆ ಒಳಗಾಗುವ ಯಾವುದೇ ಅಗತ್ಯವಿಲ್ಲ. ಯಾರಿಗಾದರೂ ಸೋಂಕು ತಗುಲಿದರೆ, ಅವರು ದೇವರನ್ನು ನೆನಪಿಸಿಕೊಳ್ಳಬೇಕು, ಭಗವದ್ಗೀತೆ ಓದಬೇಕು. ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ನೀವು ಮನಸ್ಸನ್ನು ಗೆದ್ದರೆ ಜಗತ್ತನ್ನು ಗೆದ್ದಂತೆ. ನಿಮ್ಮ ಮನಸ್ಸು ಆರೋಗ್ಯವಾದರೂ, ನೀವು ಆರೋಗ್ಯವಾಗಿರುತ್ತೇನೆ ಮತ್ತು ಯಾರಿಂದಲೂ ನಿಮಗೆ ತೊಂದರೆ ಪಡಿಸಲು ಸಾಧ್ಯವಾಗುವುದಿಲ್ಲ. ಸಂಕ್ರಾಮಿಕದ ಈ ಸಂದರ್ಭದಲ್ಲಿ ವೈದ್ಯರುಗಳು ನೀಡುತ್ತಿರುವ ಸಲಹೆಗಳು ಅನೇಕ ವರ್ಷಗಳಿಂದ ಭಾರತೀಯ ಜೀವನಶೈಲಿಯ ಅವಿಭಾಜ್ಯ ಭಾಗವಾಗಿದೆ. ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಅನುಸರಿಸುವ ಮೂಲಕ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಶ್ರೀಮಂತ ಸಂಪ್ರದಾಯವನ್ನು ಗುರುತಿಸುವುದು ಮತ್ತು ಅನುಸರಿಸುವುದು ಇಂದಿನ ಅವಶ್ಯಕತೆಯಾಗಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top