ರಾಷ್ಟ್ರೀಯ ಸ್ವಯಂಸೇವಕ ಸಂಘ ಅನೇಕರಿಗೆ ಮೊದಲ ಪಾಠಶಾಲೆ ಎಂದೇ ಹೇಳಬಹುದು.ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಹೋಗುತ್ತಿದದ್ದು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಕೊಡುತ್ತಿದ್ದ ದೊಡ್ಡ ರಜೆಯಲ್ಲಿ. ರಜೆ ಬಂದ ಕೂಡಲೇ ಕೈ ಬೀಸಿ ಕರೆಯುವ ಗೋಕರ್ಣದ ಬೀಚ್ ಅಲೆಗಳು ಹಾಗೂ ಅಜ್ಜಿ ಮನೆಯ ಕೋಟಿ ತೀರ್ಥ ಕಟ್ಟೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ಮೂರರ ಪ್ರಭಾವ ಗೋಕರ್ಣದತ್ತ ಪ್ರಯಾಣದ ಅಡಿಪಾಯವಾಗಿತ್ತು.
ಬೆಳ್ಳಗ್ಗೆ ಬೇಗನೆ ಬೀಸಿ ನೀರು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ನಾನು ಮತ್ತು ನನ್ನ ಚಿಕ್ಕಮ್ಮನ ಮಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಸೈಕಲಿನಲ್ಲಿ ಸವಾರಿ ಮಾಡಿ ಹೋಗುತ್ತಿದ್ದುದು. ಮುಖ್ಯವಾಗಿ ಆಟ ಆಡಲು ಅಲ್ಲಿ ತುಂಬಾ ಮಕ್ಕಳು ನಮ್ಮ ಹಾಗೇ ಬಂದು ಸೇರಿ ಕಲ್ಲಿಟ್ಟು ಕ್ರಿಕೆಟ್ ಆಡಲು ಶುರುಮಾಡಿದರೆ ಹೇಗೆ ಸಮಯ ಹಿಂದೆ ಹೋಗುತ್ತಿತ್ತು ತಿಳಿಯುತ್ತಿರಲಿಲ್ಲ. ಆದರೆ ಒಂದು ಮಾತ್ರ ಸತ್ಯ ಶಾಖೆಗೆ ಪ್ರತಿದಿನ ಆಟ ಆಡಲು ಹೋದರು ನಮಗೆ ಗೊತ್ತಿಲ್ಲದಂತೆ ಅನೇಕ ಜೀವನ ಪಾಠಗಳು ಕಲಿತು ಬಿಟ್ಟಿರುತ್ತಿದ್ದೆವು.
ಶ್ಲೋಕಗಳು,ಪ್ರಾರ್ಥನೆ, ಸುಭಾಷಿತ ಇದರೊಂದಿಗೆ ಶಿಸ್ತು, ಸಮಯ ಪ್ರಜ್ಞೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಧಾರವಾಗಿ ಪ್ರತಿ ಸೇವಕನಲ್ಲೂ ಭಾರತೀಯತೆಯನ್ನು ಹೇರಳವಾಗಿ ಬೆಳೆಸಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುತ್ತಿತ್ತು. ಹಾಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೇರು ಗಟ್ಟಿಯಾಗಿ ಬೆಳೆದು ನಮ್ಮಂತ ಅನೇಕ ಮಕ್ಕಳಿಗೆ ಸರಿಯಾದ ದಾರಿ ತೊರುವ ಪಾಠಶಾಲೆಯಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು ಭಾರತದೇಶದ ಹೆಮ್ಮೆಯನ್ನು ಹೆಚ್ಚಿಸುವ ಯುವಕರನ್ನು ಬೆಳೆಸುತ್ತಿದೆ. ಅನೇಕ ವರ್ಷಗಳಿಂದಲೂ ಕಲ್ಪವೃಕ್ಷದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನದೇ ಆದ ಕೊಡುಗೆ ಸಮಾಜಕ್ಕೆ ಸದಾ ನೀಡುತ್ತಾ ಬಂದಿದೆ. ಹಾಗೇ ದೊಡ್ಡವರು ಚಿಕ್ಕವರು ಸೇರಿ ಸೇವಕರ ಸಂಖ್ಯೆ ಹೆಚ್ಚುತ್ತಾ ನವಭಾರತದ ನಿರ್ಮಾಣ ಕಾರ್ಯ ಆರಂಭವಾಗಿದೆ. ಬಹುಶಃ ಬರೀಯ ಶಾಖೆಗೆ ಹೋಗುವುದು ಮಾತ್ರವಲ್ಲ ಅಲ್ಲಿ ಕಲಿತ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಇಡೀಯ ದೇಶಕ್ಕೆ ಮಾದರಿಯಾಗಿ ಕೆಲಸ ಮಾಡುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ ತ್ಯಾಗ ಸೇವೆಯು ಇವತ್ತು ಸಾವಿರಾರು ಜನರು ಜೀವ ಉಳಿಸುವಲ್ಲಿ ಹಸಿವು ನೀಗಿಸುವಲ್ಲಿ ಉಸಿರಾಟಕ್ಕೆ ಆಮ್ಲಜನಕ ನೀಡುವಲ್ಲಿ ಹಾಸಿಗೆ ನೀಡಿ ಅವರ ಆರೋಗ್ಯ ಸುಸ್ಥಿತಿಗೆ ಬರುವಲ್ಲಿ ಸತತ ಪರಿಶ್ರಮ ವಹಿಸುತ್ತಿದ್ದಾರೆ. ಭಾರತ ಮಾತೆಯ ಋಣ ಸಂದಾಯ ಮಾಡುವ ಪವಿತ್ರ ಕಾರ್ಯ ಮಾಡುವ ಸಮಯ ಬಂದಾಗಿದೆ ಎಂದು ಛಲ ಬಿಡದ ಸಾವಿರಾರು ಸೇವ ಕೇಂದ್ರ ತೆಗೆದು ಜಾತಿ ಮತ ಧರ್ಮ ನೋಡದೆ ಭಾರತೀಯ ಮಕ್ಕಳೆನ್ನುವ ಭಾವದಿಂದ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬಂತೆ ಫಲ ಅಪೇಕ್ಷಿಸದೆ ಸೇವೆ ಮಾಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರನ್ನು ಒಂದು ರೀತಿಯಲ್ಲಿ ಕೊರೋನ ಯೋಧರೆಂದೆ ಹೇಳಬಹುದು. ಹೀಗಾಗಿಯೇ ಅವರನ್ನು ನೋಡುವಾಗ ಹೆಮ್ಮೆಯಾಗುವುದು ಮತ್ತು ಡಾ. ಕೇಶವ ಬಲಿರಾಂ ಹೆಡಗೆವಾರ್ ಅವರ ಈ ಸಂಘದ ಹಿಂದಿರುವ ಶ್ರಮ ಹಾಗೂ ಶಕ್ತಿ ನೆನಪಾಗುವುದು.
ಹೇಳುವವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಸಾವಿರ ಹೇಳುತ್ತಾರೆ, ತೆಗಳುತ್ತಾರೆ. ಆದರೆ ಯಾರು ಕೋವಿಡ್ ರೋಗಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ಪ್ರೀತಿಯ ಒಂದಷ್ಟು ಲೋಪವಿಲ್ಲದ ಸೇವೆ ಪಡೆದಿರುತ್ತಾರೆಯೋ ಅವರಲ್ಲಿ ಒಮ್ಮೆ ಕೇಳಿ ನೋಡಿ, ಏಕೆಂದರೆ ಪ್ರತಿಯೊಂದು ಸ್ವಯಂಸೇವಕ ಸಮಾಜದ ಜನರ ಸೇವೆ ಮಾಡುವಾಗ ಅವನು ತನ್ನ ತಂದೆ ತಾಯಿ ಬಂಧು ಬಳಗ ಎಂದೇ ತಿಳಿದು ಎಲ್ಲಾರ ಸೇವೆ ಮಾಡುವುದು. ಹಾಗಾಗೇ ಪ್ರತಿ ರೋಗಿಗೂ ಈ ನಿಷ್ಕಲ್ಮಶ ಸೇವೆಯೇ ಹೃದಯಸ್ಪರ್ಶಿ ಹಾಗೂ ಬೇಗ ಗುಣಮುಖವಾಗುವುದರಲ್ಲಿ ಅನುಮಾನವಿಲ್ಲ.
ಇದೆಲ್ಲಾ ಬರುವುದು ಸಂಘದ ಮೂಲ ಬೇರಿನಿಂದ ಒಂದು ಗಿಡದ ಬೇರುಗಳು ಗಟ್ಟಿಯಾಗಿ ಮಣ್ಣಿನೊಂದಿಗೆ ನೆಲೆ ನಿಂತರೆ ಅದು ಮರವಾಗಿ ಬೆಳೆದು ಸಿಹಿಯಾದ ಹಣ್ಣು ಕೊಡಬಲ್ಲದು. ಅದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೂಲ ಉದ್ದೇಶದ ಸೇವೆ ತ್ಯಾಗದ ಮಣ್ಣಿನೊಂದಿಗೆ ಬೆರೆತು ಇವತ್ತು ವೃಕ್ಷವಾಗಿ ಸಿಹಿಯಾದ ಫಲ ಸಮಾಜದ ಉಳಿವಿಗಾಗಿ ನೀಡುತ್ತಿವೆ. ಇಷ್ಟು ಬೆಳೆಯಲು ಕಾರಣ ಬೇರು ಎಂಬುದನ್ನು ಮರೆಯುವಂತಿಲ್ಲ.
ಸ್ವಯಂ ಪ್ರೇರಣೆಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಪ್ಲಾಸ್ಮಾ ಬ್ಯಾಂಕ್ ಕೂಡ ಶುರು ಮಾಡಿ ಇವತ್ತು ಅನೇಕರಿಗೆ ತುರ್ತು ಸಂದರ್ಭದಲ್ಲಿ ಬೇಕಾದ ಪ್ಲಾಸ್ಮಾ ಒದಗಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಬಂಧುಗಳೆಕದು ತಿಳಿದು ಕೊರೋನದಿಂದ ಮರಣ ಹೊಂದಿದ ದೇಹವನ್ನು ತಾವೇ ಸ್ವತಃ ಮಗನಂತೆ ಶವ ಸಂಸ್ಕರ ಮಾಡುವ ಕಾಯಕದಲ್ಲೂ ನೆರವು ನೀಡಿ ಒಂದು ಕುಟುಂಬದ ಕಣ್ಣಿರು ಒರೆಸುವಂತ ಶ್ರೇಷ್ಠ ಕೆಲಸ ಇನ್ನೇನಿದೆ ಹೇಳಿ. ಅಂತಹ ಪುಣ್ಯ ಕೆಲಸವನ್ನು ತಮ್ಮ ಮನೆ ಬಂಧು ಬಳಗ ಮರೆತು ದೇಶದ ಮಕ್ಕಳಿಗೆ ಸೇವೆಯ ಹೆಗಲು ಕೊಟ್ಟು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿದ್ದಾರೆ. ಪ್ರತಿ ದಿನವೂ ಏರುತ್ತಿರುವ ಕೊರೋನ ಸಂಖ್ಯೆಯ ಮಧ್ಯೆ ರೋಗಿಗಳ ಸೇವೆಗೆಂದು ಜೀವದ ಹಂಗು ತೊರೆದು ಕೊರೋನಗೆ ಭಯ ಭೀತರಾಗದೆ ಪಿಪಿಕಿಟ್ ಧರಿಸಿ ಬರುತ್ತಿರುವ ಸ್ವಯಂಸೇವಕರ ಸಂಖ್ಯೆಯು ಅಷ್ಟೇ ಹೆಚ್ಚುತ್ತಿದೆ.
ಇನ್ನು ಈ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಮ್ಮಿಂದೊಮ್ಮೆಲೆ ಎದ್ದು ಬಂದ ಶಕ್ತಿಯಲ್ಲ ಅಥವಾ ಚುನಾವಣೆ ಪ್ರಚಾರಕ್ಕಾಗಲಿ ಯಾವುದೋ ಹಣಗಳಿಸುವ ಉದ್ದೇಶದಿಂದ ಬಂದಿದ್ದು ಅಲ್ಲ ಇದು ಸತ್ಯವಾಗಿದ್ದರೆ ಹಣದ ಆಸೆಗೆ ಕೆಲಸ ಮಾಡುತ್ತಿದ್ದಾರು ಏಕೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನರ ಸೇವೆಗಾಗಿ ಓಡೋಡಿ ಬರಬೇಕಿತ್ತು ಅಲ್ಲವೇ ಹಾಗಾಗೇ ಸಂಘದ ಉದ್ದೇಶವೇ ಸೇವೆ ತ್ಯಾಗ ಇವುಗಳ ಪ್ರತೀಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದು ಇಲ್ಲಿವರೆಗೆ ಬೆಳೆಯಲು ನೂರಾರು ಕಹಿಗಳನ್ನು ಮೆಟ್ಟಿ ಸಿಹಿಯನ್ನು ಸಮಾಜಕ್ಕೆ ಹಂಚಿ ಭಾರತ ಮಾತೆಯ ಸೇವೆಗೆ ಭಾರತ ಮಾತೆಯ ಮಕ್ಕಳ ಸೇವೆಗೆ ವಿವೇಕಾನಂದರು ಕೇಳಿದ ನೂರು ಜನ ಉಕ್ಕಿನ ನರಮಂಡಲ ಇರುವ ಯುವಕರಂತೆ ಸದಾ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಅಪರೂಪದ ವ್ಯಕ್ತಿತ್ವಗಳ ಸಾಗರ ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಂದು ಬಂದಿರುವ ಕೋರೊನ 2ನೇ ಅಲೆ ಕಾಲದಲ್ಲಿ ಮಾತ್ರ ಸ್ವಯಂ ಸೇವಕರು ಸೇವೆ ಮಾಡಿರುವುದಲ್ಲ ಹಿಂದೆ ಬಂದಿರುವ ಕೊರೋನ 1ನೇ ಅಲೆಯ ಸಂದರ್ಭದಲ್ಲಿಯೂ ಸೋಂಕಿತರ ಸೇವೆ ಮಾಡಿದೆ ಎಂಬುದನ್ನು ನೆನಪಿಸಿಕೊಳ್ಳಿ.ಅಂದು ಕೊಡಗಿನಲ್ಲಿ ಪ್ರವಾಹ ಬಂದಾಗ ಓಡಿ ಹೋಗಿ ಅನೇಕರ ಪ್ರಾಣ ಉಳಿಸಿ ಅವರಿಗೆ ಊಟ ವಸತಿ ಎಲ್ಲಾ ವ್ಯವಸ್ಥೆ ಕಲ್ಪಿಸಿ ಅಲ್ಲಿರುವ ಜನರ ಸೇವೆ ಮಾಡಿದ್ದು ಇದೇ ಸ್ವಯಂಸೇವಕರು.
ಹೀಗೆಯೇ ಇನ್ನೂ ಅನೇಕ ರೀತಿಯಲ್ಲಿ ದೇಶಕ್ಕೆ ಸಂಕಷ್ಟಗಳು ಬಂದಾಗ ತಮ್ಮ ಮನೆಗೆ ತಮಗೆ ಸಂಕಷ್ಟ ಬಂದಂತೆ ತುಡಿಯುವ ಮನಸ್ಸುಗಳ ಜನರು ಏನೇ ಆದರೂ ಪ್ರತಿ ಬಾರಿ ಬಂದು ಸೇವೆ ಮಾಡುತ್ತಾರಲ್ಲ ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೀವನ ಪಾಠಗಳು. ಇದರಿಂದಾಗಿ ಸಂಘದ ಬಗ್ಗೆ ಹೆಮ್ಮೆಯಾಗುವುದು. ನಾವು ಕೂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿಯೊಬ್ಬರಿಗೂ ಕೈಯಲ್ಲಿ ಆದ ಸಹಾಯವನ್ನು ಮಾಡೋಣ. ಆಗದಿದ್ದರೆ ಅವರಿಗೆ ಸಣ್ಣ ಪ್ರೋತ್ಸಾಹದ ಪ್ರೀತಿಯ ಭರವಸೆಯ ನುಡಿಗಳನ್ನು ಕೊಡೋಣ. ಕೊರೋನ ವಿರುದ್ಧ ಎಲ್ಲರೂ ಒಂದಾಗಿ ಸಕಾರಾತ್ಮಕದಿಂದ ಹೋರಾಡೋಣ.
✍️ ಪ್ರಣವ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.