News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಮ್ಲಜನಕ, ವೈದ್ಯಕೀಯ ಪರಿಕರ ಸಾಗಿಸುವ ಕಾರ್ಯ ತೀವ್ರಗೊಳಿಸಿದ ವಾಯುಸೇನೆ, ನೌಕಾಸೇನೆ

ನವದೆಹಲಿ: ಭಾರತೀಯ ವಾಯುಪಡೆ ಮತ್ತು ನೌಕಾಪಡೆ ಆಮ್ಲಜನಕ ಕಂಟೇನರ್‌ಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸಾಗಿಸುವ ಮೂಲಕ ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಾಗರಿಕ ಆಡಳಿತಕ್ಕೆ ಸಹಾಯ ಮಾಡುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ‌

ಭಾರತೀಯ ವಾಯುಪಡೆಯ ಸಿ -17 ವಿಮಾನವು ದೇಶದೊಳಗಿನ 400 ಹಾರಾಟಗಳನ್ನು ನಡೆಸಿದೆ, ಈ ಮೂಲಕ 4,904 ಟನ್‌ ಭಾರದ   252 ಆಮ್ಲಜನಕ ಟ್ಯಾಂಕರ್‌ಗಳನ್ನು ಏರ್‌ಲಿಫ್ಟ್‌ ಮಾಡಿದೆ.

ಜಾಮ್ನಗರ, ಭೋಪಾಲ್, ಚಂಡೀಗಢ, ಪನಗಢ, ಇಂದೋರ್, ರಾಂಚಿ, ಆಗ್ರಾ, ಜೋಧ್‌ಪುರ, ಬೇಗಂಪೆಟ್, ಭುವನೇಶ್ವರ, ಪುಣೆ, ಸೂರತ್, ರಾಯ್‌ಪುರ, ಉದಯಪುರ, ಮುಂಬೈ, ಲಕ್ನೋ, ನಾಗ್ಪುರ, ಗ್ವಾಲಿಯರ್, ವಿಜಯವಾಡ, ಬರೋಡಾ, ದಿಮಾಪ್‌ ನಗರಗಳಿಗೆ ಏರ್‌ಲಿಫ್ಟ್‌ ಮಾಡಿದೆ. 1,233 ಟನ್‌ಗಳಷ್ಟು 72 ಕ್ರಯೋಜೆನಿಕ್ ಆಮ್ಲಜನಕ ಶೇಖರಣಾ ಕಂಟೇನರ್‌ಗಳನ್ನು ಏರ್‌ಲಿಫ್ಟ್ ಮಾಡಲು ವಾಯುಪಡೆಯ ವಿಮಾನವು 59 ಅಂತರರಾಷ್ಟ್ರೀಯ ಹಾರಾಟಗಳನ್ನು ನಡೆಸಿತು. ಕಂಟೈನರ್‌ಗಳು ಮತ್ತು ಸಿಲಿಂಡರ್‌ಗಳನ್ನು ಸಿಂಗಾಪುರ, ದುಬೈ, ಬ್ಯಾಂಕಾಕ್, ಯುಕೆ, ಜರ್ಮನಿ, ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾದಿಂದ ಖರೀದಿಸಲಾಗಿದೆ. ಇದಲ್ಲದೆ, ಸಿ -17 ಮತ್ತು ಐಎಲ್ -76 ವಿಮಾನಗಳನ್ನು ಇಸ್ರೇಲ್ ಮತ್ತು ಸಿಂಗಾಪುರದಿಂದ ಕ್ರೈಯೊಜೆನಿಕ್ ಆಮ್ಲಜನಕ ಕಂಟೇನರ್, ಆಮ್ಲಜನಕ ಉತ್ಪಾದಕಗಳು ಮತ್ತು ವೆಂಟಿಲೇಟರ್‌ಗಳನ್ನು ಸಾಗಾಣೆ ಮಾಡುವ ಕಾರ್ಯವನ್ನು ಮಾಡಲಾಗಿದೆ.

ನೌಕಾಪಡೆಯು ತನ್ನ ಐಎನ್‌ಎಸ್ ತಲ್ವಾರ್, ಕೋಲ್ಕತಾ, ಐರಾವತ್, ಕೊಚ್ಚಿ, ತಬರ್, ತ್ರಿಕಾಂಡ್, ಜಲಶ್ವಾ ಮತ್ತು ಶಾರ್ದುಲ್ ಅನ್ನು  ವಿದೇಶಗಳಿಂದ ಆಮ್ಲಜನಕ ಕಂಟೇನರ್, ಸಿಲಿಂಡರ್‌ಗಳು, ಸಾಂದ್ರಕಗಳು ಮತ್ತು ಸಂಬಂಧಿತ ಸಾಧನಗಳನ್ನು ಸಾಗಿಸಲು ನಿಯೋಜಿಸಿದೆ. ಮುಂಬರುವ ದಿನಗಳಲ್ಲಿ, ಬ್ರೂನಿಯ ದೋಹಾ, ಕುವೈತ್ ಮತ್ತು ಮುವಾರಾದಿಂದ ಐಎನ್ಎಸ್ ತರ್ಕಶ್, ಶಾರ್ದುಲ್ ಮತ್ತು ಜಲಶ್ವಾಗಳಲ್ಲಿ ಆಮ್ಲಜನಕ ಕಂಟೇನರ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಲೋಡ್ ಮಾಡಲು ಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top