News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೆಹಲಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರೀ ಸಂಖ್ಯೆಯ ಆಮ್ಲಜನಕ ಸಾಂದ್ರಕಗಳ ವಶ

ನವದೆಹಲಿ: ಎರಡು ದುಬಾರಿ ರೆಸ್ಟೋರೆಂಟ್‌ಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ದೆಹಲಿ ಪೊಲೀಸರು 105 ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ನಾಲ್ಕು ಜನರನ್ನು ಬಂಧಿಸಿದ್ದಾರೆ.

ಖಾನ್ ಮಾರುಕಟ್ಟೆ ಪ್ರದೇಶದಲ್ಲಿ ನೆಲೆಗೊಂಡಿರುವ ಜನಪ್ರಿಯ ರೆಸ್ಟೋರೆಂಟ್ ಖಾನ್ ಚಾಚಾ ಮತ್ತು ಒಂಬತ್ತು ಟೌನ್ ಹಾಲ್ ರೆಸ್ಟೋರೆಂಟ್‌ನಿಂದ 96 ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ದೆಹಲಿಯ ಲೋಧಿ ಕಾಲೋನಿ ಪ್ರದೇಶದ ರೆಸ್ಟೋರೆಂಟ್ ಆಂಡ್‌ ಬಾರ್‌ನಿಂದ ದೆಹಲಿ ಪೊಲೀಸರು 419 ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಂಡ ನಂತರ ಖಾನ್‌ ಮಾರುಕಟ್ಟೆ ಮೇಲೆ ದಾಳಿ ನಡೆದಿದೆ. ಲೋಧಿ ಕಾಲೋನಿಯ ಘಟನೆಗೆ ಸಂಬಂಧಿಸಿದಂತೆ ಸತೀಶ್ ಸೇಥಿ, ವಿಕ್ರಾಂತ್ ಮತ್ತು ಹಿತೇಶ್ ಎಂಬ ನಾಲ್ವರನ್ನು ಬಂಧಿಸಲಾಗಿದೆ. ಇವರುಗಳು ಈ ಉಪಕರಣಗಳ ಕಾಳದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿ ನೀಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಹಿತೇಶ್  ಖಾನ್ ಮಾರ್ಕೆಟ್ ಪ್ರದೇಶದಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಇನ್ನೂ ಕೆಲವು ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಲಾಗಿದೆ ಎಂದು ಬಹಿರಂಗಪಡಿಸಿದ್ದ, ಅದರ ನಂತರ ಪೊಲೀಸ್ ತಂಡ ಗುರುವಾರ ರಾತ್ರಿ ಟೌನ್ ಹಾಲ್ ರೆಸ್ಟೋರೆಂಟ್‌ನಲ್ಲಿ ದಾಳಿ ನಡೆಸಿ ಒಂಬತ್ತು ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಂಡಿದೆ.

“ಖಾನ್ ಚಾಚಾ ರೆಸ್ಟೋರೆಂಟ್‌ನಲ್ಲಿ ಹೆಚ್ಚಿನ ಆಮ್ಲಜನಕ ಸಾಂದ್ರಕಗಳನ್ನು ಇರಿಸಲಾಗಿದೆ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ತಂಡವು ಮತ್ತೊಂದು ದಾಳಿ ನಡೆಸಿ ಖಾನ್ ಚಾಚಾ ರೆಸ್ಟೋರೆಂಟ್‌ನಿಂದ 96 ಸಾಂದ್ರಕಗಳನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ ಈವರೆಗೆ ಒಟ್ಟು 524 ಆಮ್ಲಜನಕ ಸಾಂದ್ರಕಗಳನ್ನು ಮರುಪಡೆಯಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.

ನವನೀತ್ ಕಲ್ರಾ ಈ ಮೂರು ರೆಸ್ಟೋರೆಂಟ್‌ಗಳ ಮಾಲೀಕನಾಗಿದ್ದಾರೆ. ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಆತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top