
ಉಧಮ್ಪುರ್: ಪ್ರಯಾಣಿಸುವ ವೇಳೆ ಕಾಣಸಿಗುವ ಕೆಲವು ದೃಶ್ಯಗಳು ಮನೆಗೆ ತಲುಪಿದ ನಂತರವೂ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುತ್ತವೆ. ಈಗ ಬನಿಹಾಲ್ ಕೂಡ ಈ ಪಟ್ಟಿಗೆ ಸೇರಿದೆ.
ಬನಿಹಾಲ್ನ ಪರಿಚಯವು ಕೇವಲ ಉದ್ದವಾದ ಸುರಂಗಗಳು, ಹಿಮಾವೃತ ಶಿಖರಗಳು ಮತ್ತು ಸುಂದರ ಕಣಿವೆಗಳಿಗೆ ಮಾತ್ರ ಸೀಮಿತವಾಗಿ ಉಳಿಯುವುದಿಲ್ಲ. ಹಾಲಿವುಡ್ನ ಪ್ರಸಿದ್ಧ ಸೈನ್ನಿಂದ ಪ್ರೇರಣೆ ಪಡೆದು ಬನಿಹಾಲ್ ಪರ್ವತಗಳ ಮೇಲೆ 100 ಅಡಿ ಉದ್ದದ ‘ಬನಿಹಾಲ್’ ಲ್ಯಾಂಡ್ಮಾರ್ಕ್ ನಿರ್ಮಾಣವಾಗಿದೆ. ಇದು ಬನಿಹಾಲ್ ಪ್ರದೇಶದ ಹೊಸ ಗುರುತಾಗಲಿದೆ.
ಜುಲೈ 3ರಂದು ಶ್ರೀ ಅಮರನಾಥ ಯಾತ್ರೆ ಪ್ರಾರಂಭವಾಗುವುದಕ್ಕೆ ಸರಿಯಾಗಿ ಈ ವಿಶಾಲ ಲ್ಯಾಂಡ್ಮಾರ್ಕ್ ಸಿದ್ಧವಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ರಸ್ತೆಯಲ್ಲಿ ಸಂಚರಿಸುವ ಲಕ್ಷಾಂತರ ಯಾತ್ರಿಕರು, ಪ್ರವಾಸಿಗರು ಮತ್ತು ಪ್ರಯಾಣಿಕರು ದೂರದಿಂದಲೇ ಈ ಹೊಳೆಯುವ ಚಿಹ್ನೆಯನ್ನು ನೋಡಿ ಪುಳಕಿತಗೊಳ್ಳುವುದು ಶತಸಿದ್ಧ.
ಈ ಲ್ಯಾಂಡ್ಮಾರ್ಕ್ ಪ್ರಯಾಣಿಕರನ್ನು ಕೆಲವು ಕ್ಷಣ ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುವಂತೆ ಆಕರ್ಷಿಸುವುದಲ್ಲದೆ, ಬನಿಹಾಲ್ ಅನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ಹೊಸ ಮತ್ತು ಶಾಶ್ವತ ಗುರುತಾಗಿ ಸ್ಥಾಪಿಸುತ್ತದೆ.
ಬನಿಹಾಲ್ ವಿಧಾನಸಭಾ ಕ್ಷೇತ್ರದ ಶಾಸಕ ಸಜ್ಜಾದ್ ಶಾಹೀನ್ ಅವರು ಇತ್ತೀಚೆಗೆ ಈ ವಿಶಾಲ ಲ್ಯಾಂಡ್ಮಾರ್ಕ್ನ ಉದ್ಘಾಟನೆ ಮಾಡಿದರು. ಪರ್ವತದ ಇಳಜಾರಿನಲ್ಲಿ ಸ್ಥಾಪಿಸಲಾಗಿರುವ ಈ ಚಿಹ್ನೆಯು ಸುಮಾರು 100 ಅಡಿ ಉದ್ದ ಮತ್ತು ಸುಮಾರು 20 ಅಡಿ ಎತ್ತರವಿದೆ. ಕಠಿಣ ಹವಾಮಾನವನ್ನು ತಡೆಯುವಂತೆ ವಿಶೇಷ ತಂತ್ರಜ್ಞಾನ ಬಳಸಿ ಇದನ್ನು ನಿರ್ಮಿಸಲಾಗಿದೆ. ಈ ಹೊಸ ಲ್ಯಾಂಡ್ಮಾರ್ಕ್ ಬನಿಹಾಲ್ ಪ್ರದೇಶಕ್ಕೆ ಹೆಚ್ಚುವರಿ ಪ್ರವಾಸಿ ಆಕರ್ಷಣೆಯನ್ನು ತರುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



