
ತಿರುವನಂತಪುರಂ: ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA) ಅಡಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಬಿಗಿ ನಿಯಮಗಳು ಪಾರದರ್ಶಕತೆ ಮತ್ತು ದುರ್ಬಳಕೆ ತಡೆಗಟ್ಟುವ ಉದ್ದೇಶ ಹೊಂದಿದೆ. ಆದರೆ ಚರ್ಚ್ಗಳು ಮಾತ್ರ ಇದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿವೆ.
ಕೇರಳದ ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ನ ಕೊಟ್ಟಾಯಂ ಡಯಾಸಿಸ್ ಮೆಟ್ರೋಪಾಲಿಟನ್ ಯುಹಾನನ್ ಮಾರ್ ಡಯಾಸ್ಕೋರೋಸ್ ಅವರು ಈ ನಿಯಮಗಳು ದತ್ತಿ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಕೇಂದ್ರ ಸರ್ಕಾರ FCRA ನಿಯಮಗಳನ್ನು ಬಿಗಿಗೊಳಿಸಿರುವುದಕ್ಕೆ ಮುಖ್ಯ ಕಾರಣಗಳುವಿದೇಶಿ ನಿಧಿಗಳ ದುರ್ಬಳಕೆಯನ್ನು ತಡೆಯುವುದು, ಧರ್ಮಾಂತರಕರಣ, ಉಗ್ರವಾದಿ ಚಟುವಟಿಕೆಗಳು ಮತ್ತು ರಾಷ್ಟ್ರ ವಿರೋಧಿ ಕಾರ್ಯಗಳಿಗೆ ಹಣ ಹರಿಯುವುದನ್ನು ತಡೆಗಟ್ಟುವುದು, ಎಲ್ಲಾ ಸಂಸ್ಥೆಗಳು ತಮ್ಮ ಖಾತೆಗಳನ್ನು ಪಾರದರ್ಶಕವಾಗಿ ನಿರ್ವಹಿಸುವಂತೆ ಖಚಿತಪಡಿಸುವುದು. ಹಿಂದೆ ಕಂಡುಬಂದ ಅನೇಕ ಉಲ್ಲಂಘನೆಗಳನ್ನು ತಪ್ಪಿಸುವುದು.
ಆದರೆ ಚರ್ಚ್ಗಳು ಮಾತ್ರ ಕೇಂದ್ರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕೇಂದ್ರವನ್ನು ಪ್ರಶ್ನೆ ಮಾಡುತ್ತಿವೆ. ನಮ್ಮ ಖಾತೆಗಳು ಈಗಾಗಲೇ ಲೆಕ್ಕಪರಿಶೋಧನೆಯಾಗುತ್ತಿವೆ ಮತ್ತು ಪಾರದರ್ಶಕವಾಗಿವೆ ಎಂದು ಹೇಳುತ್ತಿವೆ. ಕೇಂದ್ರ ಸರ್ಕಾರವೂ ಇದನ್ನು ಸ್ವಾಗತಿಸುತ್ತದೆ. ಆದರೆ ದೇಶದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳು ಏಕರೂಪದ ನಿಯಮಗಳಿಗೆ ಬದ್ಧರಾಗಬೇಕು ಎಂಬುದು ಸರ್ಕಾರದ ನಿಲುವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



