
ಡೆನ್ಮಾರ್ಕ್ ಸರ್ಕಾರವು ತನ್ನ ದೇಶದಲ್ಲಿ ಇಸ್ಲಾಮಿಕ್ ಪ್ರಾರ್ಥನಾ ಘೋಷಣೆ ಅಜಾನ್ನ ಅನ್ನು ಸಾರ್ವಜನಿಕ ಲೌಡ್ ಸ್ಪೀಕರ್ ಮೂಲಕ ಪ್ರಸಾರ ಮಾಡುವುದಕ್ಕೆ ಮತ್ತೊಮ್ಮೆ ಸಂಪೂರ್ಣ ನಿಷೇಧವನ್ನು ಹೇರಿದೆ.
ಡೆನ್ಮಾರ್ಕ್ ಇಮ್ಮಿಗ್ರೇಷನ್ ಮಂತ್ರಿ ಮಾರ್ಟನ್ ಬೋಡ್ಸ್ಕೋವ್ ಅವರು ಈ ಪ್ರಸ್ತಾಪವನ್ನು ಮುಂದಿಟ್ಟಿದ್ದು ಡೆನ್ಮಾರ್ಕ್ನಲ್ಲಿ ಅಜಾನ್ ಕೇಳಬಾರದು ಎಂದು ಹೇಳಿದ್ದಾರೆ.
ಅವರು “ಡೆನ್ಮಾರ್ಕ್ನಲ್ಲಿ ನಡೆದಾಡುವಾಗ ಯಾರೂ ಇಸ್ಲಾಮಾಬಾದ್ನ ಉಪನಗರಕ್ಕೆ ಬಂದಿದ್ದೇವೆ ಎಂದು ಭಾವಿಸಬಾರದು” ಎಂದು ಹೇಳಿದ್ದಾರೆ.
ಡೆನ್ಮಾರ್ಕ್ ದೇಶದಲ್ಲಿ ಇಸ್ಲಾಮೀಕರಣವನ್ನು ತಡೆಯುವ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದು 2020 ಮತ್ತು 2025ರಲ್ಲಿ ಈಗಾಗಲೇ ಎರಡು ಬಾರಿ ಪ್ರಯತ್ನಿಸಲಾಗಿದ್ದ ಯೋಜನೆಯ ಮೂರನೇ ಪ್ರಯತ್ನವಾಗಿದೆ.
ಪ್ರಸ್ತುತ ಸರ್ಕಾರವು ಈ ನಿಷೇಧವನ್ನು ಕಾನೂನುಬದ್ಧವಾಗಿ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಾನೂನು ಪರಿಶೀಲನೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



