News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಟ್ನಾದಲ್ಲಿ ಎರಡು ಫೀಲ್ಡ್ ಆಸ್ಪತ್ರೆಗಳನ್ನು ಸಜ್ಜುಗೊಳಿಸಿದ ಸೇನೆ

ನವದೆಹಲಿ: ‌ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ವಿರುದ್ಧ ಹೋರಾಡಲು ಬಿಹಾರ ಸರ್ಕಾರಕ್ಕೆ ಸಹಾಯ ಮಾಡಲು ಭಾರತೀಯ ಸೇನೆಯು ಪಾಟ್ನಾದಲ್ಲಿ ಎರಡು ಫೀಲ್ಡ್ ಆಸ್ಪತ್ರೆಗಳನ್ನು ಸಜ್ಜುಗೊಳಿಸಿದೆ.

ಪಾಟ್ನಾದಲ್ಲಿ 500 ಹಾಸಿಗೆಗಳ ಸೌಲಭ್ಯವನ್ನು ಸ್ಥಾಪಿಸಲು ಎರಡು ಆಸ್ಪತ್ರೆಗಳ ವೈದ್ಯಕೀಯ ಅಧಿಕಾರಿಗಳು ಮತ್ತು ಇತರ ಸಹಾಯಕ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಆಸ್ಪತ್ರೆಯಲ್ಲಿ 100 ಐಸಿಯು (ತೀವ್ರ ನಿಗಾ ಘಟಕ) ಹಾಸಿಗೆಗಳು ಇರಲಿವೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಸಲುವಾಗಿ , ಹೆಚ್ಚುವರಿ ತಜ್ಞರು, ವೈದ್ಯಕೀಯ ಅಧಿಕಾರಿಗಳು, ಶುಶ್ರೂಷಾ ಸಿಬ್ಬಂದಿ ಮತ್ತು ತರಬೇತಿ ಪಡೆದ ಇನ್‌ಫಾಂಟ್ರಿ ನರ್ಸಿಂಗ್ ಸ್ಟಾಫ್‌ ಸಹಾಯಕರನ್ನು ಮುಂದಿನ ಎರಡು ದಿನಗಳಲ್ಲಿ ಇಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ.

ಸೇನೆಯ ಡೈರೆಕ್ಟರ್ ಜನರಲ್ ರ್ಯಾಂಕ್ ಅಧಿಕಾರಿಯ ಅಡಿಯಲ್ಲಿ ವಿಶೇಷವಾದ ‘ಕೋವಿಡ್ ಮ್ಯಾನೇಜ್ಮೆಂಟ್ ಸೆಲ್’ ಅನ್ನು ಸ್ಥಾಪಿಸಲಾಗಿದೆ ಮತ್ತು ಅದು ನೇರವಾಗಿ ಸೈನ್ಯದ ಉಪ ಮುಖ್ಯಸ್ಥರಿಗೆ ವರದಿ ಮಾಡುತ್ತದೆ.

ಸೆಲ್‌ನ ಸ್ಥಾಪನೆಯು ರಾಜ್ಯದಲ್ಲಿ ತನ್ನ ಕೋವಿಡ್-19 ಸ್ಪಂದನೆಯನ್ನು ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top