ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಬಿಬಿಎಂಪಿ ಬೆಡ್ ಹಂಚಿಕೆ ಸಾಫ್ಟ್‌ವೇರ್ ಅನ್ನು ಮರುವಿನ್ಯಾಸಗೊಳಿಸಲು ಇನ್ಫೋಸಿಸ್ ಸಹ ಸ್ಥಾಪಕ ನಂದನ್ ನಿಲೇಕಣಿ ಅವರಿಗೆ ಮನವಿ ಮಾಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಈ ಮನವಿಗೆ ನಿಲೇಕಣಿ ಅವರೂ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಈಗಾಗಲೇ ಪರಿಣಿತರ ತಂಡವನ್ನು ಸಹ ಸಜ್ಜುಗೊಳಿಸಿರುವುದು ಶ್ಲಾಘನೀಯ ಎಂದು ತೇಜಸ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತೇಜಸ್ವಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ನಿಲೇಕಣಿ ಅವರ ಜನಪರ ಕಾಳಜಿ, ಬದ್ಧತೆಯನ್ನು ಅಭಿನಂದಿಸಿದ್ದಾರೆ. ಹಾಗೆಯೇ ನುರಿತ ತಜ್ಞರ ಈ ತಾಂತ್ರಿಕ ತಂಡ ಐಸ್ಪಿರಿಟಿ, ಪ್ರಾಡಕ್ಟ್ ನೇಷನ್ ಸಂಸ್ಥೆಗಳ ಸಹಯೋಗದೊಂದಿಗೆ ಬೆಡ್ ಹಂಚಿಕೆ ಹಸ್ತಕ್ಷೇಪ ರಹಿತ, ಪಾರದರ್ಶಕ ವ್ಯವಸ್ಥೆ ಒಳಗೊಂಡ ಸಾಫ್ಟ್ವೇರ್ ರೂಪಿಸಲು ಸಹಕರಿಸುತ್ತಿದ್ದು, ಇಡೀ ತಂಡಕ್ಕೆ ಬೆಂಗಳೂರು ಜನತೆ ಪರವಾಗಿ ಧನ್ಯವಾದ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಶ್ರೀ@NandanNilekani ರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ.
ಶ್ರೀ ನಂದನ್ ನಿಲೇಕಣಿ ರವರ ಜನಪರ ಕಾಳಜಿ,ಬದ್ಧತೆ ಅಭಿನಂದನಾರ್ಹ.
— Tejasvi Surya (@Tejasvi_Surya) May 5, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.