News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೆಚ್ಚುವರಿ 1,000 ವೆಂಟಿಲೇಟರ್‌ಗಳನ್ನು ಭಾರತಕ್ಕೆ ಕಳುಹಿಸುತ್ತಿದೆ ಯುಕೆ

ಲಂಡನ್: ಕೋವಿಡ್-19 ರ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತವನ್ನು ಬೆಂಬಲಿಸುವ ಸಲುವಾಗಿ  ಹೆಚ್ಚುವರಿ 1,000 ವೆಂಟಿಲೇಟರ್‌ಗಳನ್ನು ಭಾರತಕ್ಕೆ ಕಳುಹಿಸುವುದಾಗಿ ಯುಕೆ ಪ್ರಕಟಿಸಿದೆ.

ಕಳೆದ ವಾರ ಯುಕೆ ಭಾರತಕ್ಕೆ  200 ವೆಂಟಿಲೇಟರ್‌ಗಳು, 495 ಆಮ್ಲಜನಕ ಸಾಂದ್ರಕಗಳು ಮತ್ತು ಮೂರು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಕಳುಹಿಸಿತ್ತು. ಇದೀಗ ಇದಕ್ಕೆ ಹೆಚ್ಚುವರಿವಾಗಿ 1,000 ವೆಂಟಿಲೇಟರ್‌ಗಳನ್ನುಭಾರತಕ್ಕೆ ಕಳುಹಿಸಿಕೊಡುವುದಾಗಿ ಯುಕೆ ಘೋಷಿಸಿದೆ.

 ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ವಿರುದ್ಧ ಭಾರತದ ಹೋರಾಟವನ್ನು ಬಲಪಡಿಸುವ ಸಲುವಾಗಿ ಹೆಚ್ಚುವರಿ ನೆರವು ನೀಡುತ್ತಿರುವುದಾಗಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಅಗತ್ಯ ಸಮಯದಲ್ಲಿ ಭಾರತದ ಜೊತೆ ಯುಕೆ ಸದಾ ನಿಲ್ಲುತ್ತದೆ ಎಂದು ಬೋರಿಸ್‌ ಪುನರುಚ್ಛರಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top