ವಾಷಿಂಗ್ಟನ್: ಸುಮಾರು 40 ಉನ್ನತ ಅಮೆರಿಕನ್ ಕಂಪನಿಗಳ ಸಿಇಒಗಳು ಒಗ್ಗೂಡಿ ಕೋವಿಡ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಭಾರತಕ್ಕೆ ಸಹಾಯ ಮಾಡುವ ಪ್ರಯತ್ನಗಳನ್ನು ಸಂಘಟಿಸಲು, ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಕಾರ್ಯಪಡೆ ರಚಿಸಿದ್ದಾರೆ. ಒಂದು ದೇಶಕ್ಕೆ ಸೀಮಿತವಾದ ಮೊದಲ ಜಾಗತಿಕ ಕಾರ್ಯಪಡೆ ಇದಾಗಿದೆ.
ಯುಎಸ್ ಚೇಂಬರ್ ಆಫ್ ಕಾಮರ್ಸ್ನ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಮತ್ತು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಮತ್ತು ಪಾರ್ಟ್ನರ್ಶಿಪ್ ಫೋರಮ್ ಮತ್ತು ಬಿಸಿನೆಸ್ ರೌಂಡ್ಟೇಬಲ್ನ ಒಗ್ಗಟ್ಟಿನ ಉಪಕ್ರಮ ಇದಾಗಿದೆ, ಸೋಮವಾರ ನಡೆಸಿದ ಸಭೆಯಲ್ಲಿ ಕಾರ್ಯಪಡೆಗೆ ಮುಂದಿನ ದಿನಗಳಲ್ಲಿ ಇವು 20,000 ಆಮ್ಲಜನಕ ಕಾನ್ಸೆಂಟ್ರೇಟರ್ಸ್ ಅನ್ನು ಭಾರತಕ್ಕೆ ನೀಡಲು ಬದ್ಧವಾಗಿದೆ ಎಂದು ತಿಳಿಸಲಾಗಿದೆ. ಕೆಲವು ವಾರಗಳಲ್ಲೇ ಆಮ್ಲಜನಕ ಕಾನ್ಸೆಂಟ್ರೇಟರ್ಸ್ ಭಾರತವನ್ನು ಸೇರಲಿವೆ.
ಕರೋನವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯ ಮಧ್ಯೆ ಭಾರತಕ್ಕೆ ನಿರ್ಣಾಯಕ ವೈದ್ಯಕೀಯ ಸರಬರಾಜು, ಲಸಿಕೆಗಳು, ಆಮ್ಲಜನಕ ಮತ್ತು ಇತರ ಜೀವ ಉಳಿಸುವ ಸಹಾಯವನ್ನು ಒದಗಿಸುವ ಹೊಸ ಯುಎಸ್ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ‘Global Task Force on Pandemic Response: Mobilising for India’ ಎಂದು ಕರೆಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.