ನವದೆಹಲಿ: ಅಂಬೇಡ್ಕರ್ ಅವರು ತಮ್ಮ ಅವಧಿಯಲ್ಲಿ ಸಂಸ್ಕೃತವನ್ನು ಅಧಿಕೃತ ರಾಷ್ಟ್ರಭಾಷೆಯನ್ನಾಗಿ ಮಾಡಲು ಪ್ರಸ್ತಾವಿಸಿದ್ದರು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ಹೇಳಿದರು
ಮಹಾರಾಷ್ಟ್ರದ ರಾಷ್ಟ್ರೀಯ ಕಾನೂನು ವಿವಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೆಳ ಹಂತದ ಕೋರ್ಟ್ಗಳಲ್ಲಿ
ಯಾವ ಭಾಷೆಯನ್ನು ಅಧಿಕೃತವಾಗಿ ಬಳಸಬೇಕೆನ್ನುವ ಅರ್ಜಿಗಳು ಬಂದಿವೆ. ಆದರೆ ಈ ಬಗ್ಗೆ ಯಾವುದೇ ಚರ್ಚೆಗಳಾಗುತ್ತಿಲ್ಲ. ಅಂಬೇಡ್ಕರ್ ಅವರು ಸಮಚಿತ್ತದಿಂದ ಭಾಷೆಯ ಬಗ್ಗೆ ವಿಶ್ಲೇಷಣೆ ಮಾಡಿದ್ದರು ಎಂದಿದ್ದಾರೆ.
ತಮಿಳು ಅಧಿಕೃತ ಭಾಷೆಯಾದರೆ ಉತ್ತರ ಭಾರತದಲ್ಲಿ ವಿರೋಧ ಉಂಟಾಗುತ್ತದೆ, ಹಿಂದಿ ರಾಷ್ಟ್ರ ಭಾಷೆಯಾದರೆ ದಕ್ಷಿಣ ಭಾರತದಲ್ಲಿ ವಿರೋಧ ಉಂಟಾಗುತ್ತದೆ. ಹಿಂದಿಗೆ ಇರುವ ವಿರೋಧ ಭಾವ ಸಂಸ್ಕೃತಕ್ಕಿಲ್ಲ, ಉತ್ತರ ಮತ್ತು ದಕ್ಷಿಣ ಭಾರತದಲ್ಲೂ ಸಂಸ್ಕೃತ ಭಾಷೆಯ ಮೇಲೆ ಗೌರವ ಇರುವುದರಿಂದ ಸಂಸ್ಕೃತ ರಾಷ್ಟ್ರಭಾಷೆಯಾಗಬಹುದೆಂದು ಪ್ರಸ್ತಾಪಿಸಿದ್ದರು. ಆದರೆ ಈ ಪ್ರಸ್ತಾಪದ ಅಂಶದ ಮೇಲೆ ಅಷ್ಟೊಂದು ವಿಸ್ತೃತ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.