ಸುಬ್ರಹ್ಮಣ್ಯ : ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ ನಾವು ಈ ದೇಶದ ನೈಜ ಇತಿಹಾಸ, ಹೋರಾಟದ ಹಾದಿಯನ್ನು ತಿಳಿಯುವ ಕೆಲಸವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಬೌದ್ಧಿಕ್ ಪ್ರಮುಖ್ ಸುರೇಶ್ ಪರ್ಕಳ ಹೇಳಿದರು.
ಅವರು ಗುತ್ತಿಗಾರಿನಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಗುರುವಾರ ಸಂಜೆ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ದೇಶದ ಇತಿಹಾಸ ಸೋಲಿನ ಇತಿಹಾಸವಲ್ಲ. ಇಲ್ಲಿ ಕೇವಲ ಅಹಿಂಸಾ ಮಾರ್ಗದಲ್ಲಿ ಮಾತ್ರವೇ ಸ್ವಾತಂತ್ರ್ಯ ಲಭ್ಯವಾಗಿಲ್ಲ, ಒದರ ಜೊತೆಗೆ ಅನೇಕ ಕ್ರಾಂತಿಕಾರಿಗಳೂ ದೇಶಕ್ಕಾಗಿ ಹೋರಾಡಿದ್ದಾರೆ, ಬಲಿದಾನ ಮಾಡಿದ್ದಾರೆ. ಅವರ ದೇಶ ಭಕ್ತಿ ಅಪಾರವಾಗಿತ್ತು ಎನ್ನುವುದನ್ನು ಗಮನಿಸಬೇಕು ಎಂದರು.
ಆದರೆ ಇಂದು ಗಾಂಧಿ ಕುಟುಂಬವನ್ನು ಮಾತ್ರವೇ ನೆನಪಿಸುವ ಕೆಲಸ ಮಾಡಲಾಗುತ್ತಿದೆ. ದೇಶ ವಿಭಜನೆಯ ಕಾಲದಲ್ಲಿ ಇಲ್ಲಿನ ನಾಯಕರು ಮೌನವಹಿಸಿದ ಕಾರಣದಿಂದಲೇ ಇಂದು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ದೇಶ ವಿಭಜನೆಗೆ ಕಾಂಗ್ರೆಸ್, ಬ್ರಿಟಿಷ್ ಹಾಗೂ ಮುಸ್ಲಿಂಲೀಗ್ ಪ್ರಮುಖ ಕಾರಣವಾಯಿತು ಎಂದರು.ಇದರ ಜೊತೆಗೆ ದೇಶದ ರಾಷ್ಟ್ರಧ್ವಜ, ವಂದೇ ಮಾತರಂ ತುಂಡಾಯಿತು,ಅದೇ ತುಂಡು ಮಾಡುವ ಪ್ರವೃತಿ ಸ್ವಾತಂತ್ರ್ಯಾ ನಂತರವೂ ಮುಂದುವರಿದಿದೆ ಎಂದು ವಿಷಾದಿಸಿದ ಅವರು ಈಗ ಭವ್ಯ ಭಾರತದ ಇತಿಹಾಸ ನೆನಪು ಮಾಡುವ ಕೆಲಸ ಮಾಡಬೇಕಿದೆ, ಭಯೋತ್ಪಾದನೆಯಂತಹ ವಿಷಯದ ಬಗ್ಗೆ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ.ಯುವಕರಿಗೆ ರಾಷ್ಟ್ರಭಕ್ತರ ಪಾಠವನ್ನು ಹೇಳುವುದರ ಜೊತೆಗೆ ಅವರೇ ಆದರ್ಶವಾಗಬೇಕು ಎಂದರು.
ಮುಖ್ಯಅತಿಥಿಯಾಗಿದ್ದ ಮಾಜಿ ಸೈನಿಕ ಚಂದ್ರಶೇಖರ ಮಾತನಾಡಿ ದೇಶದ ಹಿತಕ್ಕಾಗಿ ಎಲ್ಲರೂ ಒಂದಾಗಬೇಕಿದೆ. ರಾಷ್ಟ್ರದ್ರೋಹಿಗಳನ್ನು ಮಟ್ಟಹಾಕುವ ಕೆಲಸ ನಡೆಯಬೇಕು ಎಂದರು.ವೇದಿಕೆಯಲ್ಲಿ ವಿಶ್ವಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮಕ್ಕೆ ಮುನ್ನ ಬಾಕಿಲದಿಂದ ಪಂಜಿನ ಮೆರವಣಿಗೆ ನಡೆಯಿತು.ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ ಮೆರವಣಿಗೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ನೂರಾರು ರಾಷ್ಟ್ರಭಕ್ತ ತರುಣರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದರು. ಹಿಂದೂ ಜಾಗರಣ ವೇದಿಕೆಯ ಸತೀಶ್ ಮೂಕಮಲೆ ವಂದೇಮಾತರಂ ಹಾಡಿದರು. ಲೋಕೇಶ್ ಡಿಆರ್ ಸ್ವಾಗತಿಸಿ ರವಿಪ್ರಕಾಶ್ ಬಿವಿ ವಂದಿಸಿದರು.ವಿನಯ್ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.