ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಸೆಶೆಲ್ಸ್ ಅಧ್ಯಕ್ಷ ವೇವೆಲ್ ರಾಮ್ಕಲವಾನ್ ಜಂಟಿಯಾಗಿ ಇಂದು ಸೆಶೆಲ್ಸ್ನಲ್ಲಿ ಭಾರತೀಯ ಧನ ಸಹಾಯದಿಂದ ಅನುಷ್ಠಾನಗೊಂಡ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಉನ್ನತ ಮಟ್ಟದ ಈ ಕಾರ್ಯಕ್ರಮದಲ್ಲಿ ಹೊಸ ಮ್ಯಾಜಿಸ್ಟ್ರೇಟ್ ಕೋರ್ಟ್ ಕಟ್ಟಡದ ಜಂಟಿ ಇ-ಉದ್ಘಾಟನೆ ಮತ್ತು ಫಾಸ್ಟ್ ಪೆಟ್ರೋಲ್ ಹಡಗನ್ನು ಸೀಶೆಲ್ಸ್ ಕೋಸ್ಟ್ ಗಾರ್ಡ್ಗೆ ಹಸ್ತಾಂತರಿಸುವುದು ಸೇರಿದೆ. ಒಂದು ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಕೂಡ ಈ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುತ್ತಿದೆ ಮತ್ತು 10ಕ್ಕೂ ಹೆಚ್ಚು ಹಯ ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ಸಹ ಒಳಗೊಂಡಿದೆ.
2020 ರ ಅಕ್ಟೋಬರ್ನಲ್ಲಿ ಸೆಶೆಲ್ಸ್ನಲ್ಲಿ ನಡೆದ ಚುನಾವಣೆಯಲ್ಲಿ ಮಹತ್ವದ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದ ರಾಮ್ಕಲವಾನ್ ಅವರೊಂದಿಗಿನ ಮೋದಿಯವರ ಮೊದಲ ಸಂವಾದ ಇದಾಗಿದೆ.
ಅಧ್ಯಕ್ಷ ರಾಮಕಲವಾನ್ ಭಾರತೀಯ ಮೂಲದವರು. ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ಅವರು ತಮ್ಮ ಪೂರ್ವಜರ ಮೂಲವನ್ನು ಹೊಂದಿದ್ದಾರೆ. ಪಿಐಒ ಸಂಸದರ ಸಮ್ಮೇಳನದ ಅಂಗವಾಗಿ 2018 ರ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅವರು ತಮ್ಮ ಸ್ಥಳೀಯ ಗ್ರಾಮ ‘ಪಾರ್ಸೌನಿ’ಗೂ ಭೇಟಿ ನೀಡಿದ್ದರು. ಅವರ ಸಂಪುಟದಲ್ಲಿ ಭಾರತೀಯ ಮೂಲದ ಮೂವರು ಮಂತ್ರಿಗಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.