ಭೋಪಾಲ್: ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗಬ್ಬರ್ ಅಲಿಯಾಸ್ ಮುಸ್ತಫಾ ಎಂಬ ವ್ಯಕ್ತಿಯನ್ನು ಮಧ್ಯಪ್ರದೇಶದ ಇಂದೋರ್ನಲ್ಲಿ ದ್ವಾರಕಪುರಿ ಪೊಲೀಸರು ಬಂಧಿಸಿದ್ದಾರೆ.
ಈತ ನಾನು ಮುಸ್ಲಿಂ ಎಂಬುದನ್ನು ಮುಚ್ಚಿಟ್ಟು ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಆಕೆ ಗರ್ಭಿಣಿಯಾಗಿದ್ದಾಳೆ. ಈ ವೇಳೆ ಆತನ ನಿಜ ಬಣ್ಣ ಬಯಲಾಗಿದೆ.
ಆಸ್ಪತ್ರೆಯಲ್ಲಿ ಆರೋಪಿಗೆ ತನ್ನ ಗುರುತಿನ ಚೀಟಿಯನ್ನು ಹಾಜರುಪಡಿಸುವಂತೆ ಕೇಳಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಹಿಂದೂ ಮಹಿಳೆ ಸುಮಾರು ಒಂದು ವರ್ಷದ ಹಿಂದೆ ಹುಟ್ಟುಹಬ್ಬದ ಕೂಟದಲ್ಲಿ ಮುಸ್ತಫಾನನ್ನು ಭೇಟಿಯಾಗಿದ್ದಾಳೆ. ಅವನು ತನ್ನನ್ನು ‘ಗಬ್ಬರ್’ ಎಂದು ಗುರುತಿಸಿಕೊಂಡಿದ್ದಾನೆ. ನಂತರ, ಅವನು ಕಳೆದ ವರ್ಷ ಏಪ್ರಿಲ್ನಲ್ಲಿ ಮಹಿಳೆಯನ್ನು ಮದುವೆಯಾಗಿದ್ದಾನೆ. ಆಕೆಗೆ ಅವನ ನಿಜವಾದ ಗುರುತಿನ ಬಗ್ಗೆ ತಿಳಿದಿರಲಿಲ್ಲ. ಮುಸ್ತಫಾ ಜಿಮ್ನಾಷಿಯಂನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಕಳೆದ ಭಾನುವಾರ ಮಹಿಳೆ ತನ್ನ ಗರ್ಭಧಾರಣೆಗೆ ವೈದ್ಯಕೀಯ ಪರೀಕ್ಷೆಗೆ (ಅಲ್ಟ್ರಾಸೌಂಡ್ ಪರೀಕ್ಷೆ) ಒಳಗಾಗಲು ಆರೋಪಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಳು.
ಈ ವೇಳೆ ವೈದ್ಯ ಆತನ ಗುರುತಿನ ಚೀಟಿಯನ್ನು ಪ್ರಸ್ತುತಪಡಿಸಲು ಕೇಳಿದಾಗ, ಮಹಿಳೆಗೆ ಅವನ ಹೆಸರು ‘ಗಬ್ಬರ್’ ಅಲ್ಲ, ಮುಸ್ತಫಾ ಎಂದು ತಿಳಿದುಬಂದಿದೆ. ಆರೋಪಿಯು ತನ್ನ ನಿಜವಾದ ಗುರುತಿನ ಬಗ್ಗೆ ವಂಚನೆ ಮತ್ತು ಸುಳ್ಳು ಹೇಳಿದ್ದನ್ನು ಅರಿತುಕೊಂಡ ಸಂತ್ರಸ್ತೆ ದ್ವಾರಕಪುರಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಮಧ್ಯಪ್ರದೇಶದ ಧರ್ಮ ಸ್ವಾತಂತ್ರ್ಯ ಅಧಿನಿಯಮ (ಮತಾಂತರ ವಿರೋಧಿ ಕಾನೂನು) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವರದಿಯ ಪ್ರಕಾರ, ಮುಸ್ತಫಾನನ್ನು ಈಗ ಬಂಧಿಸಲಾಗಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಷಯ ತಿಳಿದ ನಂತರ ಹಲವಾರು ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ಆತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಘೋಷಣೆಗಳನ್ನು ಕೂಡ ಎತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.