ಮುಂಬೈ : ಮಹಾರಾಷ್ಟ್ರದಲ್ಲಿನ ರಾಯಗಡ ಕೋಟೆ ಉತ್ಖನನದ ಸಂದರ್ಭ ಚಿನ್ನದ ಬಳೆಯೊಂದು ದೊರಕಿದೆ. ಈ ಚಿನ್ನದ ಬಳೆಯು
ಛತ್ರಪತಿ ಶಿವಾಜಿ ಮಹಾರಾಜರ ಕಾಲದ್ದೆಂದು ಪುರಾತತ್ವ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮಹಾರಾಷ್ಟ್ರದ ಮಹಾಡ್ನಲ್ಲಿರುವ ಬೆಟ್ಟದ ಮೇಲಿರುವ ಕೋಟೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ( ಎಎಸ್ಐ) ಮತ್ತು ರಾಯಗಡ ಅಭಿವೃದ್ಧಿ ಪ್ರಾಧಿಕಾರ ( ಆರ್ಡಿಒ) ಸಹಯೋಗದಲ್ಲಿ ಉತ್ಖನನ ನಡೆಸಲಾಗುತ್ತಿತ್ತು.
ಉತ್ಖನನ ಸಂದರ್ಭ ದೊರಕಿದ ಚಿನ್ನದ ಬಳೆಯ ಸುದ್ದಿಯನ್ನು ಕೇಳಿ ತಕ್ಷಣವೆ ಸ್ಥಳಕ್ಕೆ ಧಾವಿಸಿದ ಶಿವಾಜಿ ವಂಶಸ್ಥರಾದ ಶ್ರೀ ಸಂಭಾಜಿರಾಜೆ ಛತ್ರಪತಿ ಅವರು ಬಳೆಯನ್ನು ಪರಿಶೀಲಿಸಿದರು, ಶಿವಾಜಿ ಮಹಾರಾಜರ ಕಾಲದಲ್ಲಿನ ಜೀವನ ಶೈಲಿ, ಸಾಂಸ್ಕೃತಿಕ ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಹಿಂದೆ ಉತ್ಖನನ ಸಂದರ್ಭ ಇಲ್ಲಿ ಅನೇಕ ಆಭರಣಗಳು, ಪಾತ್ರೆಗಳು, ನಾಣ್ಯಗಳು ಸೇರಿದಂತೆ ಹಲವು ವಸ್ತುಗಳು ದೊರೆತಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.