News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಿರ್ಮಾಣವಾಗಿದೆ ಲಾಕ್‌ಡೌನ್‌ ಪರಿಸ್ಥಿತಿ: ನಮ್ಮ ನಡೆಗಳ ಬಗ್ಗೆ ನಡೆಯಬೇಕಿದೆ ಅವಲೋಕನ

ಮನುಷ್ಯ ತನ್ನ ತಂತ್ರಜ್ಞಾನ, ವಿಜ್ಞಾನದಲ್ಲಿ ಮುಂದುವರೆದು ಎಲ್ಲದಕ್ಕೂ ಉತ್ತರ ಕಂಡುಕೊಳ್ಳುತ್ತೇನೆ ಎನ್ನುವ ಹಮ್ಮು ಬಿಮ್ಮಿನಲ್ಲಿರುವಾಗ ಅವೆಲ್ಲವನ್ನು ಕ್ಷಣ ಮಾತ್ರದಲ್ಲೇ ತೊಡೆದು ಹಾಕಿ ಲಾಕ್‌ಡೌನ್‌ ಎನ್ನುವ ವಿಷಕೂಪದಲ್ಲಿ ಬಂಧಿಸಿ, ಶೂನ್ಯತೆಯನ್ನು ಅರಿವಾಗಿಸಿದ ಕೊರೋನಾ ಮಹಾಮಾರಿ ಮನುಷ್ಯರ ನಡುವೆ ಬಿಟ್ಟು ಹೋದ ಪಾಠಗಳು ಅಷ್ಟಿಷ್ಟಲ್ಲ. ಆದರೆ ಕೊರೋನಾ ಎನ್ನುವ ಮಹಾಮಾರಿಯ ತೀವ್ರತೆ ಇಳಿಕೆಯ ನಂತರವೂ ಮನುಷ್ಯರ ಜೀವನ ಮತ್ತೆ  ಸಹಜ ಸ್ಥಿತಿಗೆ ಬರುವುದು ಸುಲಭ ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಮತ್ತೆ ಕೊರೋನಾ ಎರಡನೆಯ ಅಲೆ ಮುನ್ನಲೆಗೆ ಬಂದು ಮರಣ ಮೃದಂಗ ಬಾರಿಸುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ನಡೆಯ ಬಗ್ಗೆ ಅವಲೋಕನ ಮಾಡಬೇಕಾಗಿದೆ.

ಹೌದು ಕೊರೋನಾ ಮೌನವಾಯಿತು ಎಂಬ ನಮ್ಮ ನೆಮ್ಮದಿಯ ಮಾತು ಈಗ ಸುಳ್ಳೆನಿಸಿ ಮತ್ತೆ ಲಾಕ್‌ಡೌನ್‌ ಎನ್ನುವ ಮಾತುಗಳು ನಿಜವಾಗುವ ಎಲ್ಲಾ ಸಾಧ್ಯತೆಗಳು ನಮ್ಮ ಕಣ್ಣ ಮುಂದಿವೆ. ಕೊರೋನಾ ಬಂದು ಅದಕ್ಕೆ ಔಷಧ ಕಂಡು ಹಿಡಿದು ನಾವು ಇನ್ನು ಮುಂದೆ ಆರಾಮ ಎಂದು ಬೀಗುತ್ತಿದ್ದ ನಮಗೆ ಮತ್ತೆ ಕೊರೋನಾ ಮಹಾಸ್ಪೋಟ, ಲಾಕ್‌ಡೌನ್‌ ಎನ್ನುವ ಸುದ್ದಿಗಳು ನಮ್ಮ ಪುಟ್ಟ ಸಂಭ್ರಮದ ವಾತವರಣವನ್ನು ಮಂಕಾಗಿಸುತ್ತಿದೆ.

ಕೊರೋನಾ ಅವಧಿಯಲ್ಲಿ ತಮ್ಮ ಬದುಕಿನ ನಿರ್ವಹಣೆಯಲ್ಲಿ ಸೋತು ಬೀದಿಗೆ ಬಂದವರೇ ಹೆಚ್ಚು. ದೊಡ್ಡ ದೊಡ್ಡ ಕಂಪನಿಗಳು ತಮ್ಮ ಲಾಭವನ್ನು ಉಳಿಸಲೋಸುಗ ಉದ್ಯೋಗಿಗಳ ಬದುಕಿಗೆ ಕತ್ತರಿ ಇಟ್ಟರು, ಅಂಗಡಿ, ಮುಂಗಟ್ಟುಗಳು ಬಂದ್‌ಗಳಾದಗ ಸಂಘ ಸಂಸ್ಥೆಗಳು ಕೊಡುವ ಕಿಟ್‌ಗಾಗಿ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಯಿತು. ದಿನಗೂಲಿಯಲ್ಲೇ ಅನ್ನ ಕಾಣುತ್ತಿದ್ದವರು ಅಕ್ಷರಶಃ ನಿರ್ಗತಿಕರಾದರು. ಕೆಲಸಕ್ಕಾಗಿ ವಲಸೆ ಬಂದ ಕಟ್ಟಡ ಕಾರ್ಮಿಕರು ಇಲ್ಲಿ ನಮಗ್ಯಾರಿಲ್ಲ ಎಂದು ಬರಿಗಾಲಿನಲ್ಲಿಯೇ ನಡೆದುಕೊಂಡು ಹೋದರು. ಇವೆಲ್ಲಾ ನಮ್ಮ ಕಣ್ಣ ಮುಂದೆ ಕಣ್ಕಟ್ಟುತ್ತಿರುವಾಗಲೇ ವಿದೇಶಗಳಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ ಲಾಕ್‌ಡೌನ್‌ ಆಗುತ್ತಿರುವ ಸುದ್ದಿಗಳು ನಮ್ಮನ್ನು ಒಂದು ರೀತಿಯ ಆತಂಕಕ್ಕೆ ತಳ್ಳಿ ಹಾಕಿದೆ.

ದೇಶದಲ್ಲಿ ಕೊರೋನಾ ಗಂಭೀರ ಪ್ರಕರಣಗಳನ್ನು ಕಾಣುತ್ತಿರುವ 11 ನಗರಗಳಲ್ಲಿ ರಾಜ್ಯದ ಬೆಂಗಳೂರು ಕೂಡ ಒಂದು ಎನ್ನುವುದು ಅಘಾತಕಾರಿಯಾಗಿ ಮಾಹಿತಿ. ಪ್ರಸ್ತುತ ರಾಜ್ಯ ಸರಕಾರ ಹೊರಡಿಸಿದ ಕರಡು ಪ್ರತಿಯಲ್ಲಿ 8 ಜಿಲ್ಲೆಗಳಿಗೆ ಕೆಲವೊಂದು ನಿರ್ಬಂಧಗಳನ್ನು ಹೊರಡಿಸಿದೆ. ಅದರಲ್ಲಿ ಶಾಲೆ, ಹಾಸ್ಟೆಲ್‌, ಜಿಮ್, ಈಜು ಕೊಳಗಳ ನಿರ್ಬಂಧಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.

ಆದರೆ ಇವೆಲ್ಲವೂ ಈ ಮೊದಲೂ ನಮಗಿದ್ದ ಲಾಕ್ಡೌನ್ ಮುನ್ಸೂಚನೆಗಳೇ. ಈ ಮೇಲಿನ ನಿಯಮಗಳಲ್ಲಿ ʼಏನೂ ಆಗಲ್ಲಾʼ ಎನ್ನುವ ನಮ್ಮ ಸಹಜ ಮನಸ್ಥಿತಿಯನ್ನು ತೋರಿಸಿದರೆ ಲಾಕ್ಡೌನ್ ಅಧಿಸೂಚನೆ ನಮ್ಮನ್ನು ಮತ್ತೆ ಬಂಧನಕ್ಕೆ ದೂಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಎಲ್ಲಾ ತೊಡಕುಗಳನ್ನು ನಿವಾರಿಸಲು ನಾವೆಷ್ಟು ಎಚ್ಚರದಲ್ಲಿದ್ದೇವೆ ಎನ್ನುವ ಅವಲೋಕನ ನಡೆಯಬೇಕಾಗಿದೆ.

 

✍️ ವಿಶ್ವಾಸ್‌ ಅಡ್ಯಾರ್

Tags:

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top