ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಇಂದು ಬೆಳಿಗ್ಗೆ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ, ಉಭಯ ರಾಜ್ಯಗಳ ಮತದಾರರು ದಾಖಲೆ ಸಂಖ್ಯೆಯಲ್ಲಿ ತಮ್ಮ ಮತವನ್ನು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
“ಅಸ್ಸಾಂ ಚುನಾವಣೆಯ ಎರಡನೇ ಹಂತವು ಇಂದು ನಡೆಯುತ್ತಿದೆ. ಈ ಹಂತದ ಎಲ್ಲ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಬಲಪಡಿಸಬೇಕು ಎಂಬುದು ನನ್ನ ವಿನಂತಿ” ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
“ಪಶ್ಚಿಮ ಬಂಗಾಳದ ಜನರು ತಮ್ಮ ಮತದಾನದ ಸ್ಥಳದಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಒತ್ತಾಯಿಸುತ್ತೇನೆ” ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಎರಡೂ ರಾಜ್ಯಗಳ ವಿವಿಧ ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಂತು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುತ್ತಿರುವುದು ಕಂಡು ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಸೌತ್ 24 ಪರಗಣ, ಬಂಕುರಾ, ಪಶ್ಚಿಮ್ ಮೇದಿನಿಪುರ ಮತ್ತು ಪುರ್ಬಾ ಮೇದಿನಿಪುರ ಜಿಲ್ಲೆಗಳಿಂದ ಒಟ್ಟು 30 ವಿಧಾನಸಭಾ ಕ್ಷೇತ್ರಗಳು ಇಂದು ಮತದಾನಕ್ಕೆ ಒಳಪಡುತ್ತಿವೆ. ಕಣದಲ್ಲಿರುವ 171 ಅಭ್ಯರ್ಥಿಗಳಲ್ಲಿ 152 ಪುರುಷರು ಮತ್ತು ಉಳಿದವರು ಮಹಿಳೆಯರು.
ಈ ಅಭ್ಯರ್ಥಿಗಳಲ್ಲಿ ಇಬ್ಬರು ನಿಸ್ಸಂದೇಹವಾಗಿ ಪ್ರಮುಖ ವ್ಯಕ್ತಿಗಳು, ಅಂದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಮಾಜಿ ಆಪ್ತ ಸುವೆಂದು ಅಧಿಕಾರಿ. ಇವರು ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಜೆಪಿ ಸೇರಿದರು. ನಂದಿಗ್ರಾಮ್ನಲ್ಲಿ ಮಮತಾ ಮತ್ತು ಅಧಿಕಾರಿ ಪರಸ್ಪರರ ವಿರುದ್ಧ ಕಣದಲ್ಲಿದ್ದಾರೆ.
ಅಸ್ಸಾಂನಲ್ಲಿ ಎರಡನೇ ಹಕತ 13 ಜಿಲ್ಲೆಗಳ 39 ಕ್ಷೇತ್ರಗಳ 345 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಅಸ್ಸಾಂನಲ್ಲಿ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಸಂಜೆ 6: 30 ರವರೆಗೆ ಮತದಾನ ನಡೆಯಲಿದೆ.
Second phase of the Assam polls takes place today. Requesting all eligible voters of this phase to strengthen the festival of democracy by exercising their franchise.
— Narendra Modi (@narendramodi) April 1, 2021
Urging the people of West Bengal in whose seats there is polling taking place today to vote in record numbers.
— Narendra Modi (@narendramodi) April 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.