ನವದೆಹಲಿ: ಮುಂದಿನ ವಾರದಲ್ಲಿ, ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳು ಅಂಬಾಲಾ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರಲಿವೆ ಎಂದು ವರದಿ ತಿಳಿಸಿದೆ.
ಈ ಮೂರು ಯುದ್ಧ ವಿಮಾನ ಮಾರ್ಚ್ 30 ಅಥವಾ 31 ರಂದು ಫ್ರಾನ್ಸ್ನಿಂದ ಹೊರಡುವ ಸಾಧ್ಯತೆ ಇದೆ.
ಅಲ್ಲದೇ, ಮತ್ತೆ 9 ರಫೇಲ್ ಯುದ್ಧ ವಿಮಾನ ಫ್ರಾನ್ಸ್ನಿಂದ ಏಪ್ರಿಲ್ ಮಧ್ಯದಲ್ಲಿ ಹೊರಟು ಭಾರತಕ್ಕೆ ಬರಲಿದೆ ಎಂದು ವರದಿ ಹೇಳಿದೆ, ಮುಂದಿನ ತಿಂಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಐಎಎಫ್ ಹೊಸ ರಫೆಲ್ ಸ್ಕ್ವಾಡ್ರನ್ ಅನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಯಿದೆ.
ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಏಪ್ರಿಲ್ನಲ್ಲಿ ಫ್ರಾನ್ಸ್ಗೆ ತೆರಳಲಿದ್ದಾರೆ ಮತ್ತು ಬೋರ್ಡೆಕ್ಸ್-ಮೆರಿಗ್ನಾಕ್ ಏರ್ ಬೇಸ್ನಿಂದ ಒಂಬತ್ತು ಯುದ್ಧ ವಿಮಾನಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಅಂಬಾಲಾ ಮೂಲದ ಐಎಎಫ್ನ ಗೋಲ್ಡನ್ ಏರೋ ದಳವು ಈಗಾಗಲೇ ಜುಲೈ 2020 ಮತ್ತು ಜನವರಿ 2021 ರ ನಡುವೆ 11 ರಫೆಲ್ ಯುದ್ಧ ವಿಮಾನವನ್ನು ವಾಯುಸೇನೆಗೆ ಸೇರಿಸಿಕೊಂಡಿದೆ.
ಕನಿಷ್ಠ ಏಳು ರಫೇಲ್ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಆದರೆ ಐಎಎಫ್ ಪೈಲಟ್ಗಳು ಮತ್ತು ನಿರ್ವಹಣಾ ಸಿಬ್ಬಂದಿಯ ತರಬೇತಿಗಾಗಿ ಫ್ರಾನ್ಸ್ನಲ್ಲಿ ಉಳಿದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.