ನವದೆಹಲಿ: ರಾಜ್ಯಸಭೆಯು ನಿನ್ನೆ ವಿಮಾ (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರಿಸಿದೆ. ಇದು ವಿಮಾ ಕಾಯ್ದೆ, 1938 ಅನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದೆ, ಇದು ಭಾರತೀಯ ವಿಮಾ ಕಂಪನಿಗಳಲ್ಲಿ ವಿದೇಶಿ ಹೂಡಿಕೆಯ ಮಿತಿಯನ್ನು ಹೆಚ್ಚಿಸುತ್ತದೆ.
ವಿದೇಶಿ ನೇರ ಹೂಡಿಕೆ ಮಿತಿಯನ್ನು ಅಸ್ತಿತ್ವದಲ್ಲಿರುವ 49% ರಿಂದ 74%ಕ್ಕೆ ಹೆಚ್ಚಿಸಲು ಮಸೂದೆ ಅವಕಾಶ ನೀಡುತ್ತದೆ. ವಿಮಾ ಕಂಪನಿಗಳ ಮಾಲೀಕತ್ವ ಮತ್ತು ನಿಯಂತ್ರಣದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಅವಕಾಶವನ್ನೂ ಇದು ಹೊಂದಿದೆ.
ನಿನ್ನೆ ನಡೆದ ಚರ್ಚೆಗೆ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎಫ್ಡಿಐ ಮಿತಿ ಶೇಕಡಾ 74 ರಷ್ಟು ಪ್ರತಿ ವಿಮಾ ಕಂಪನಿಗೆ ಕಡ್ಡಾಯವಲ್ಲ, ಏಕೆಂದರೆ ಇದು ಕೇವಲ ಹೆಚ್ಚಿನ ಮಿತಿಯನ್ನಷ್ಟೇ ನಿಗದಿಪಡಿಸುತ್ತದೆ. ಮಿತಿ ಹೆಚ್ಚಳದಿಂದ ಎಲ್ಲಾ ಕಂಪನಿಗಳಿಗೆ ಆ ಮಟ್ಟಕ್ಕೆ ಸ್ವಯಂಚಾಲಿತ ವಿದೇಶಿ ಹೂಡಿಕೆ ಸಿಗುತ್ತದೆ ಎಂದರ್ಥವಲ್ಲ ಮತ್ತು ಪ್ರತಿಯೊಂದು ಕಂಪನಿಯು ಹೂಡಿಕೆಯ ಮಿತಿಯನ್ನು ನಿರ್ಧರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರವು ಸಾಮಾಜಿಕ ನ್ಯಾಯಕ್ಕಾಗಿ ಸಂಪೂರ್ಣ ಬದ್ಧವಾಗಿದೆ ಮತ್ತು ವಿಮಾ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಮೀಸಲಾತಿ ನೀತಿ ಮುಂದುವರಿಯುತ್ತದೆ ಎಂದು ಸದನಕ್ಕೆ ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.