ನವದೆಹಲಿ: ಖಾಸಗಿ ವಲಯದಲ್ಲಿನ ಶೇ.75 ರಷ್ಟು ನಿಗದಿತ ಸಂಬಳದವರೆಗಿನ ಉದ್ಯೋಗಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸಲು ಹರಿಯಾಣ ಸರ್ಕಾರ ಇತ್ತೀಚಿಗೆ ನಿರ್ಧಾರ ತೆಗೆದುಕೊಂಡಿತ್ತು, ಇದೀಗ ಜಾರ್ಖಂಡ್ ಕೂಡ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ.
ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸಚಿವ ಸಂಪುಟ ಇದೇ ರೀತಿಯ ನೀತಿಯನ್ನು ಅಂಗೀಕರಿಸಿದೆ ಎಂದು ಮೂಲಗಳು ವರದಿ ಮಾಡಿವೆ.
ಖಾಸಗಿ ವಲಯದ ತಿಂಗಳಿಗೆ 30,000 ರೂ ವೇತನದವರೆಗಿನ ಶೇಕಡಾ 75 ರಷ್ಟು ಉದ್ಯೋಗಗಳನ್ನು ಸ್ಥಳೀಯ ಜನರಿಗೆ ನೀಡಲು ಜಾರ್ಖಾಂಡ್ ನಿರ್ಧರಿಸಿದೆ. ಮುಂದಿನ ವಾರ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸೊರೆನ್ ಈ ನೀತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮಾರ್ಚ್ 17 ರಂದು ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.
ರಾಜ್ಯ ಸರ್ಕಾರವು ಮೂವರು ಸದಸ್ಯರ ಉಪಸಮಿತಿಯನ್ನು ರಚಿಸಿದೆ ಎಂದು ವರದಿಯಾಗಿದೆ, ಅದರ ನೀತಿಯ ಆಧಾರದ ಮೇಲೆ ಈ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗುತ್ತಿದೆ.
ಆರ್ಥಿಕ ಸಮೀಕ್ಷೆಯ ಪ್ರಕಾರ, ಜಾರ್ಖಂಡ್ನಲ್ಲಿ ನಿರುದ್ಯೋಗ ದರವು 2020 ರ ಮೇ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕದ ಉತ್ತುಂಗದಲ್ಲಿ ಶೇ.59.2 ರ ಗರಿಷ್ಠ ಮಟ್ಟಕ್ಕೆ ಏರಿತು, ಕ್ರಮೇಣ 2021 ಜನವರಿಯಲ್ಲಿ ಶೇಕಡಾ 11.3 ಕ್ಕೆ ಇಳಿಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.