ನವದೆಹಲಿ: ಶ್ರೀಲಂಕಾ ಭಾರತದಿಂದ ಹತ್ತು ಅತ್ಯಾಧುನಿಕ ರೈಲ್ವೆ ಪ್ರಯಾಣಿಕ ಬೋಗಿಗಳನ್ನು ಪಡೆದಿದೆ. ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಎಕನಾಮಿಕ್ ಸರ್ವಿಸ್(RITES)ಯಿಂದ ಶ್ರೀಲಂಕಾ ರೈಲ್ವೆಗೆ 160 ಬೋಗಿಗಳನ್ನು ಪೂರೈಸುವ ಭಾಗವಾಗಿ ಹತ್ತು ಬೋಗಿಗಳನ್ನು ಸದ್ಯ ಪೂರೈಸಲಾಗಿದೆ.
“ಕೊಲಂಬೊ ಬಂದರಿಗೆ 10 ಅತ್ಯಾಧುನಿಕ ರೈಲ್ವೆ ಪ್ರಯಾಣಿಕ ಬೋಗಿಗಳ ಆಗಮನದೊಂದಿಗೆ ಸಾರಿಗೆ ಕ್ಷೇತ್ರದಲ್ಲಿ ಭಾರತ-ಶ್ರೀಲಂಕಾ ಸಹಕಾರವನ್ನು ವಿಸ್ತರಿಸುತ್ತಿದೆ” ಎಂದು ಕೊಲಂಬೊದ ಭಾರತೀಯ ಹೈಕಮಿಷನ್ ಬುಧವಾರ ಟ್ವೀಟ್ ನಲ್ಲಿ ತಿಳಿಸಿದೆ.
ಶ್ರೀಲಂಕಾ ರೈಲ್ವೆಗೆ RITESನಿಂದ ಬೋಗಿಗಳ ಸರಬರಾಜಿಗೆ ಭಾರತೀಯ ಸಾಲದ ಮೂಲಕ ಹಣಕಾಸು ಒದಗಿಸಲಾಗುತ್ತಿದೆ ಎಂದು ಅದು ಹೇಳಿದೆ.
ಇತ್ತೀಚೆಗೆ ಶ್ರೀಲಂಕಾ ಪಶ್ಚಿಮ ಕಂಟೈನರ್ ಟರ್ಮಿನಲ್ (ಡಬ್ಲ್ಯುಸಿಟಿ) ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಭಾರತ ಮತ್ತು ಶ್ರೀಲಂಕಾವು 2019 ರಲ್ಲಿ “ಆರ್ಥಿಕ ಯೋಜನೆಗಳ ಸಹಕಾರ” ದ ಬಗ್ಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿತು. ಕಂಟೇನರ್ ಟರ್ಮಿನಲ್ ಅಭಿವೃದ್ಧಿ ಮತ್ತು ಕಾರ್ಯಾಚರಣೆ ಎಂಒಯುನಲ್ಲಿನ ಯೋಜನೆಗಳಲ್ಲಿ ಒಂದಾಗಿದೆ ಮತ್ತು ಇದು ಜಂಟಿ ಉದ್ಯಮವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.