ನವದೆಹಲಿ: ಕೋವಿಡ್-19 ನಿಂದ ಪಾರಾಗಿ ಗುಣಮುಖನಾಗಿ ಹೊರಹೊಮ್ಮಿರುವ ಅಸ್ಸಾಂನ ರಂಜಿಮ್ ಪ್ರಬಲ್ ದಾಸ್ ಅವರು ಜಾಯಿಂಟ್ ಎಂಟರೆನ್ಸ್ ಪರೀಕ್ಷೆ (JEE ಮೈನ್ಸ್) ಪರೀಕ್ಷೆಯಲ್ಲಿ ಟಾಪ್ ಸ್ಥಾನ ಪಡೆದುಕೊಂಡಿದ್ದಾರೆ. JEE ಮೈನ್ಸ್ ಪರೀಕ್ಷೆಯ 2021ರ ಫೆಬ್ರವರಿ ಸೆಷನ್ನಲ್ಲಿ ಶೇ.100ರಷ್ಟು ಅಂಕ ಪಡೆದ ಆರು ಮಂದಿ ಭಾರತೀಯರಲ್ಲಿ ಆತ ಕೂಡ ಒಬ್ಬ.
ದೇಶದಾದ್ಯಂತ ಸುಮಾರು 6.5 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು.
ಸಮಸ್ಯೆ ನಿವಾರಣೆಯ ಮೇಲಿನ ತನ್ನ ಪ್ರೀತಿಯೇ ನನಗೆ ಗೆಲ್ಲಲು ಸಹಾಯ ಮಾಡಿತು ಎಂದು ಹೇಳಿರುವ ರಂಜಿಮ್, “ನಾನು ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಸಾವಲಿನ ಪ್ರಶ್ನೆಗಳನ್ನು ಪ್ರೀತಿಸುತ್ತೇನೆ. ನನ್ನ ಅಧ್ಯಯನದ ಸಮಯದಲ್ಲಿ ನಾನು ಗಂಟೆಗಳ ಆಧಾರದಲ್ಲಿ ವೇಳಾಪಟ್ಟಿಯನ್ನು ಸಿದ್ಧಪಡಿಸಲಿಲ್ಲ. ಆದರೆ ನಾನು ಅಧ್ಯಯನದ ವ್ಯಾಪ್ತಿಯ ಆಧಾರದ ಮೇಲೆ ವೇಳಾಪಟ್ಟಿ ಸಿದ್ಧಪಡಿಸಿದೆ ಮತ್ತು ಅಗತ್ಯವಿರುವಷ್ಟು ಸಮಯವನ್ನು ಅದರಲ್ಲಿ ಕಳೆದಿದ್ದೇನೆ.ವಿಷಯವನ್ನು ಅರ್ಥಮಾಡಿಕೊಳ್ಳುವುದು ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುವಾಗ ಅಗತ್ಯ” ಎಂದಿದ್ದಾನೆ.
“ಕಳೆದ ವರ್ಷ ನವೆಂಬರ್ನರ್ನಲ್ಲಿ ನಾನು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದೆ, ಅದು ನನ್ನನ್ನು ಧೈರ್ಯಶಾಲಿಯನ್ನಾಗಿ ಮಾಡಿತು. ನಾನು ಎಲ್ಲ ಮುನ್ನೆಚ್ಚರಿಕೆಗಳನ್ನು ಅನುಸರಿಸಿದ್ದೆ, ಆದರೂ ಸೋಂಕಿಗೆ ಒಳಗಾದೆ, ಆಗ ಗುಣಮುಖನಾಗುವತ್ತ ಗಮನ ಹರಿಸಿದೆ, ಗುಣಮುಖನಾದ ಬಳಿಕ ಓದಿನತ್ತ ಗಮನ ಹರಿಸಿದೆ ಮತ್ತು ಅದು ಭಯವನ್ನು ಮತ್ತು ಅನಿಶ್ಚಿತತೆಯನ್ನು ದೂರ ಮಾಡಿತು” ಎಂದಿದ್ದಾನೆ.
I follow Elon Musk & I plan to go to IIT Delhi for higher studies. Otherwise I’ll go to IISc Bengaluru for science graduation. When I tested COVID positive I focused on healing. Once fever was down I got back to studies: Ranjim Prabal Das who secured 100 NTA score in #JEEMains pic.twitter.com/Lrjs8GvE7Y
— ANI (@ANI) March 9, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.