ಬೆಂಗಳೂರು: ಮಾರ್ಚ್ 8 ವಿಶ್ವದಾದ್ಯಂತ ಆಚರಿಸಲ್ಪಡುವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಶುಭಾಶಯ ಕೋರಿದ ಆರೋಗ್ಯ ಸಚಿವ ಸುಧಾಕರ್, ಈ ದಿನವನ್ನು ಉಲ್ಲೇಖಿಸಿ ಮಹಿಳೆಯರನ್ನು ಬೆಂಬಲಿಸುವ ಸಲುವಾಗಿ ಒಂದು ತಿಂಗಳ ಆಂದೋಲನವನ್ನು ಆರಂಭಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಟ್ವೀಟ್ ಮಾಡಿರುವ ಡಾ. ಸುಧಾಕರ್ ಅವರು, ಮಾರ್ಚ್ 8 ರ ಅಂತರಾಷ್ಟ್ರೀಯ ಮಹಿಳಾ ದಿವಸದ ಅಂಗವಾಗಿ ನಾನು ಮಹಿಳೆಯರಿಗೆ ಬೆಂಬಲವಾಗಿ ಒಂದು ತಿಂಗಳ ಕಾಲ ಆಂದೋಲನವೊಂದನ್ನು ಆರಂಭಿಸುತ್ತಿದ್ದೇನೆಂದು ಹೇಳಿದ್ದಾರೆ.
ಈ ಆಂದೋಲನವು ಮಹಿಳೆಯರು ತಮ್ಮ ಸಾಮಾಜಿಕ ಜೀವನದಲ್ಲಿ ಎದುರಿಸುವ ಸಮಸ್ಯೆಗಳ ಸುತ್ತ ಕೇಂದ್ರೀತವಾಗಿರಲಿದೆ ಎಂದು ಸುಧಾಕರ್ ಅವರು ತಿಳಿಸಿದ್ದಾರೆ.
ಈ ಕಲ್ಪನೆಯಡಿ ಟ್ವಿಟರ್ನಲ್ಲಿ ಫೈಟಿಂಗ್ ಬ್ಯಾಟಲ್ಸ್ ಎನ್ನುವ ಹ್ಯಾಷ್ಟ್ಯಾಗ್ ನೀಡಿದ್ದು, ಇದು ಮಹಿಳೆಯರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.