ಗುವಾಹಟಿ: ಭಾರತದ ಅಕ್ಕಿ ರಫ್ತು ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನ ಸಿಗುತ್ತಿದ್ದು, ‘ಕೆಂಪು ಅಕ್ಕಿ’ ಯ ಮೊದಲ ರವಾನೆಯನ್ನು ಯುಎಸ್ಗೆ ರವಾನೆ ಮಾಡಲಾಗಿದೆ.
ಕಬ್ಬಿಣಾಂಶ ಭರಿತ ‘ಕೆಂಪು ಅಕ್ಕಿ’ ಅನ್ನು ಯಾವುದೇ ರಾಸಾಯನಿಕ ಗೊಬ್ಬರಗಳ ಬಳಕೆಯಿಲ್ಲದೆ ಬ್ರಹ್ಮಪುತ್ರ ಕಣಿವೆಯಲ್ಲಿ ಬೆಳೆಯಲಾಗುತ್ತದೆ. ಸ್ಥಳೀಯವಾಗಿ ಈ ಅಕ್ಕಿ ಪ್ರಭೇದವನ್ನು ‘ಬಾವೊ-ಧಾನ್’ ಎಂದು ಕರೆಯಲಾಗುತ್ತದೆ ಮತ್ತು ಇದು ಅಸ್ಸಾಂನ ಸಾಂಪ್ರದಾಯಿಕ ಭಕ್ಷ್ಯಗಳ ಅವಿಭಾಜ್ಯ ಅಂಗವಾಗಿದೆ.
ರಫ್ತು ಸರಕುಗಳ ಸಾಗಾಣೆಗೆ ಹಸಿರು ನಿಶಾನೆ ತೋರಿಸುವ ಸಮಾರಂಭವನ್ನು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಅಧ್ಯಕ್ಷ ಎಂ. ಅಂಗಮುತ್ತು ಅವರು ಗುರುವಾರ ಹರಿಯಾಣದ ಸೋನೆಪತ್ನಲ್ಲಿ ಎಪಿಇಡಿಎ ಉಪ ಪ್ರಧಾನ ವ್ಯವಸ್ಥಾಪಕ ವಿನಿತಾ ಸುಧಾಂಶು ಮತ್ತು ಎಲ್ಟಿ ಫುಡ್ಸ್ ಅಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಿದರು. ಪೂರ್ವ ಅಸ್ಸಾಂನ ಕೆಲವು ಭಾಗಗಳಿಂದ ಈ ಕೆಂಪು ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ.
‘ಕೆಂಪು ಅಕ್ಕಿ’ ರಫ್ತು ಹೆಚ್ಚಾದಂತೆ ಇದು ಬ್ರಹ್ಮಪುತ್ರ ಬಯಲಿನಲ್ಲಿ ಕೃಷಿ ಆದಾಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಕೆಂಪು ಅಕ್ಕಿ ಉತ್ಪಾದಿಸುವ ಪ್ರಮುಖ ಜಿಲ್ಲೆಗಳಲ್ಲಿ ಜೋರ್ಹತ್, ಗೋಲಾಘಾಟ್ ಮತ್ತು ಲಖಿಂಪುರ ಸೇರಿವೆ.
“ಅಸ್ಸಾಂ ಕೃಷಿ ಉತ್ಪನ್ನಗಳ ಸಮೃದ್ಧ ವೈವಿಧ್ಯತೆಯನ್ನು ಹೊಂದಿದೆ. ಜೋಹಾ ಅಕ್ಕಿ ಮತ್ತು ಕೆಂಪು ಅಕ್ಕಿ ಜಾಗತಿಕವಾಗಿ ಜನಪ್ರಿಯವಾಗುವ ಸಾಮರ್ಥ್ಯವನ್ನು ಹೊಂದಿದೆ. ಶುಂಠಿ, ಅನಾನಸ್ ಮತ್ತು ಕಿತ್ತಳೆ ಕೂಡ ಸಮೃದ್ಧವಾಗಿದೆ. ಈ ಎಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ನಾವು ಯೋಜಿಸುತ್ತಿದ್ದೇವೆ ”ಎಂದು ಅಂಗಮುತ್ತು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.