
ಕಲಬುರಗಿ : ಇಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನ ಹೆಚ್ಚಿಸಲು ಮತ್ತು ಹೆಚ್ಚಿನ ಆಯ್ಕೆಗಳಿರುವ ಸೌಲಭ್ಯವನ್ನು ಶಾಲಾ ಕಾಲೇಜುಗಳಿಗೆ ತಲುಪಿಸುವ ಉದ್ದೇಶದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಸ್ನ ಸಂಚಾರಿ ಲೈಬ್ರರಿಯನ್ನ ಆವಿಷ್ಕರಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಅಗತ್ಯತೆಗಳು ಹೆಚ್ಚಿರುವುದರಿಂದ ಮತ್ತು ಗ್ರಂಥಾಲಯಗಳ ಅಲಭ್ಯತೆಗಳ ಕಾರಣದಿಂದಾಗಿ ಈ ಸಂಚಾರಿ ಲೈಬ್ರರಿ ಎನ್ನುವ ವಿನೂತನ ಯೋಜನೆ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಈ ಸಂಚಾರಿ ಗ್ರಂಥಾಲಯ ( ಮೊಬೈಲ್ ಲೈಬ್ರರಿ) ತಯಾರಿಸಲಾಗಿದೆ. ಹಳೆ ಬಸ್ಸನ್ನೇ ಬಳಸಿಕೊಂಡು 3 ಲಕ್ಷ ರೂಪಾಯಿಗೂ ಅಧಿಕ ಹಣ ವ್ಯಯ ಮಾಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಸಂಚಾರಿ ಗ್ರಂಥಾಲಯದಲ್ಲಿ ಆರೋಗ್ಯ ಹಾಗೂ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಕೃತಿಗಳು, ಜೀವನ ಚರಿತ್ರೆಗಳು, ಸಾಮಾನ್ಯ ಜ್ಞಾನದ ಪುಸ್ತಕಗಳು, ಇಂಗ್ಲೀಷ್ ಸಾಹಿತ್ಯ, ಸಂವಿಧಾನ ಪುಸ್ತಕ, ದಿನಪತ್ರಿಕೆಗಳು, ಕವನ ಸಂಕಲನಗಳು, ನಾಟಕ ಪುಸ್ತಕಗಳು, ಸಾಮಾನ್ಯ ಜ್ಞಾನ ಪುಸ್ತಕಗಳು, ಹೀಗೆ ಹತ್ತಾರು ಬಗೆಯ ಪುಸ್ತಕಗಳನ್ನಿರಿಸಲಾಗಿದೆ. ಸುಮಾರು 4 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಈ ಸಂಚಾರಿ ಗ್ರಂಥಾಲಯದಲ್ಲಿದೆ. ಫ್ಯಾನ್ ಹಾಗು ಕುಡಿಯುವ ನೀರಿನ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


