ನವದೆಹಲಿ: ಕೊರೋನಾವೈರಸ್ ಲಸಿಕೆ ವಿಶ್ವದ ಅತ್ಯಂತ ಬೇಡಿಕೆಯ ಸರಕುಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಇದು ಅಂತರರಾಷ್ಟ್ರೀಯ ರಾಜತಾಂತ್ರಿಕತೆಗೆ ಹೊಸ ವ್ಯಾಖ್ಯಾನ ನೀಡುತ್ತಿದೆ. ಇದರಲ್ಲಿ ಭಾರತವು ತನ್ನ ಪ್ರತಿಸ್ಪರ್ಧಿ ಚೀನಾದ ವಿರುದ್ಧ ಮೇಲುಗೈ ಸಾಧಿಸುತ್ತಿದೆ.
ಸಾಟಿಯಿಲ್ಲದ ಲಸಿಕೆ ಉತ್ಪಾದನಾ ಶಕ್ತಿಯೊಂದಿಗೆ, ಭಾರತವು ತನ್ನ ನೆರೆಹೊರೆಯವರಿಗೆ, ಸ್ನೇಹಪರ ರಾಷ್ಟ್ರಗಳಿಗೆ ಮತ್ತು ಇತರ ರಾಷ್ಟ್ರಗಳಿಗೆ ಲಕ್ಷಾಂತರ ಪ್ರಮಾಣದಲ್ಲಿ ಲಸಿಕೆ ನೀಡುತ್ತಿದೆ.
ಇತ್ತೀಚೆಗೆ, ದಕ್ಷಿಣ ಏಷ್ಯಾದ ನೆರೆಯ ರಾಷ್ಟ್ರಗಳಾದ ನೇಪಾಳ ಮತ್ತು ಶ್ರೀಲಂಕಾಗೆ ಸಾಕಷ್ಟು ಲಸಿಕೆ ನೀಡಿದೆ, ಸುಮಾರು 40 ರಾಷ್ಟ್ರಗಳು ಭಾರತದ ಈ ಮಾನವೀಯ ಸೌಹಾರ್ದ ಭಾವದಿಂದ ಪ್ರಯೋಜನ ಪಡೆದಿವೆ.
ಭಾರತ ಇಷ್ಟಕ್ಕೆ ನಿಂತಿಲ್ಲ, ಇನ್ನೂ 34 ರಾಷ್ಟ್ರಗಳಿಗೆ ಲಸಿಕೆ ಡೋಸ್ ಅನ್ನು ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ವಿಶೇಷ ಸಂವಾದದ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ಭಾರತದಿಂದ ಕೋವಿಡ್ ಲಸಿಕೆಗಳನ್ನು ಪಡೆಯಲು ಸುಮಾರು 34 ದೇಶಗಳು ಸರದಿಯಲ್ಲಿವೆ ಎಂದು ಅವರು ಹೇಳಿದ್ದಾರೆ.
“ನಾವು ಸುಮಾರು 40 ದೇಶಗಳಿಗೆ ಲಸಿಕೆಗಳನ್ನು ಒದಗಿಸಿದ್ದೇವೆ ಮತ್ತು ಸುಮಾರು 34 ದೇಶಗಳು ಅವುಗಳನ್ನು ಮತ್ತಷ್ಟು ಪಡೆಯಲು ಸರದಿಯಲ್ಲಿವೆ. ಮುಂದಿನ ಕೆಲವು ದಿನಗಳಲ್ಲಿ ಯಾರು ಲಸಿಕೆಗಳನ್ನು ಪಡೆಯಲಿದ್ದಾರೆ ಎಂಬ ಪಟ್ಟಿಯನ್ನು ನಾವು ಅಂತಿಮಗೊಳಿಸಲಿದ್ದೇವೆ” ಎಂದು ಜೈಶಂಕರ್ ತಿಳಿಸಿದ್ದಾರೆ.
ಭಾರತದ ಜನರೊಂದಿಗೆ ಜಗತ್ತಿಗೆ ಲಸಿಕೆ ಹಾಕುವುದು ಭಾರತಕ್ಕೆ ನೈತಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ‘ಈ ವಿಷಯದಲ್ಲಿ ಜಗತ್ತು ದೇಶವನ್ನು ನಂಬುತ್ತದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.