ನವದೆಹಲಿ: 24 ವರ್ಷದ ಆರ್ಕಿಟೆಕ್ಟ್ ಆಗಿರುವ ಅರುಣ್ ಪ್ರಭು ಎನ್ಜಿ ಅವರು ತಮ್ಮ ‘ಸೋಲೋ 0.1’ ಮೂಲಕ ದೇಶದ ಗಮನವನ್ನು ಸೆಳೆದಿದ್ದಾರೆ. ಬಿಲಿಯನೇರ್ ಮತ್ತು ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ಇದೀಗ ಈ ಆರ್ಕಿಟೆಕ್ಟ್ ಜೊತೆ ಕೆಲಸ ಮಾಡುವ ಇರಾದೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ಮೂಲಕ ಅರುಣ್ ಅವರೊಂದಿಗೆ ಕೆಲಸ ಮಾಡುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದು, ಬೊಲೆರೋ ಪಿಕ್ ಮೇಲೆ ಜಾಗ ನಿರ್ಮಾಣ ಮಾಡಲು ಅವರಿಗೆ ಆಸಕ್ತಿ ಇದೆಯೇ? ಅವರು ಇದಕ್ಕಾಗಿ ನಮ್ಮೊಂದಿಗೆ ಕೆಲಸ ಮಾಡುವರೇ? ಎಂದು ಕೇಳಿದ್ದಾರೆ.
ಅರುಣ್ ಅವರು ಆಟೋ ರಿಕ್ಷಾವನ್ನು ಮನೆಯಾಗಿ ಪರಿವರ್ತಿಸಿದ್ದಾರೆ. ಅವರಿಗೆ ‘ಬೊಲೆರೊ ಪಿಕ್ ಅಪ್ ಮೇಲೆ ಸಾಕಷ್ಟು ಜಾಗವನ್ನು ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ಇದೆ.
ತಮಿಳುನಾಡಿನ ಸೇಲಂ ಬಳಿಯ ನಮ್ಮಕಲ್ ಎಂಬ ಕುಟುಂಬದ ಮನೆಯಿಂದ ಬಂದ ಪ್ರಭು ಚೆನ್ನೈನಿಂದ B.Arc ಮುಗಿಸಿ ಬೆಂಗಳೂರಿನಲ್ಲಿ 5 ಜನರೊಂದಿಗೆ ಆರ್ಕಿಟೆಕ್ಟ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
ಅವರ ಸೋಲೊ 0.1 ರೂಪಾಂತರಗೊಂಡ ಆಟೋ ಆಗಿದ್ದು ಅದು ಸ್ನಾನದತೊಟ್ಟಿ, ನಿರಂತರ ವಿದ್ಯುತ್ ಮೂಲ ಸೌರ ಫಲಕ, ಬಟ್ಟೆ ತೊಳೆಯುವ ಮತ್ತು ಒಣಗಿಸುವ ಪ್ರದೇಶ, ಲಿವಿಂಗ್ ರೂಮ್, ವರ್ಕ್ ಸ್ಪೇಸ್ ಮತ್ತು ಮಲಗುವ ಕೋಣೆಯನ್ನು ಸಹ ಹೊಂದಿದೆ. 1 ಬಿಎಚ್ಕೆ ಮನೆಯಂತೆ ಇದು ಇದ್ದು, ಇದನ್ನು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
“ಕನಿಷ್ಟ ಪ್ರಮಾಣದ ಜಾಗದಲ್ಲಿ ಸಾಕಷ್ಟು ಸಾಧಿಸಬಹುದು ಮತ್ತು ಅದನ್ನು ಸಾಧಿಸಲಾಗಿದೆ ಎಂಬ ಅರಿವು ಮೂಡಿಸುವುದು ನನ್ನ ಈ ಯೋಜನೆಯ ಏಕೈಕ ಉದ್ದೇಶವಾಗಿದೆ. ಸೋಲೋ 0.1 ಕುರಿತು ಪ್ರತಿಕ್ರಿಯೆ ಮತ್ತು ಪ್ರಾಭಿಪ್ರಾಯ ಅದ್ಭುತವಾಗಿದೆ ಮತ್ತು ಆದ್ದರಿಂದ ಸೋಲೋ 2.0 ನನ್ನ ಮುಂದಿನ ಗುರಿಯಾಗಿದೆ” ಎಂದು ಪ್ರಭು ಹೇಳುತ್ತಾರೆ.
Apparently Arun did this to demonstrate the power of small spaces. But he was also on to a larger trend: a potential post-pandemic wanderlust & desire to be ‘always mobile.’ I’d like to ask if he’ll design an even more ambitious space atop a Bolero pickup. Can someone connect us? https://t.co/5459FtzVrZ
— anand mahindra (@anandmahindra) February 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.