ನವದೆಹಲಿ: ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಒನ್ ಡಿಸ್ಟ್ರಿಕ್ಟ್ ಒನ್ ಫೋಕಸ್ ಪ್ರೊಡಕ್ಟ್ (ಒಂದು ಜಿಲ್ಲೆ, ಒಂದು ಕೇಂದ್ರಿತ ಉತ್ಪನ್ನ) ಯೋಜನೆಗೆ ಉತ್ಪನ್ನಗಳನ್ನು ಅಂತಿಮಗೊಳಿಸಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಾದ್ಯಂತ 728 ಜಿಲ್ಲೆಗಳಿಗೆ ಕೃಷಿ, ತೋಟಗಾರಿಕೆ, ಪ್ರಾಣಿ, ಕೋಳಿ, ಹಾಲು, ಮೀನುಗಾರಿಕೆ ಮತ್ತು ಜಲಚರ ಸಾಕಣೆ, ಸಮುದ್ರ ಕ್ಷೇತ್ರಗಳ ಉತ್ಪನ್ನಗಳನ್ನು ಗುರುತಿಸಲಾಗಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯಿಂದ ಅಭಿಪ್ರಾಯ ಪಡೆದುಕೊಂಡ ನಂತರ ಉತ್ಪನ್ನಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಈ ಉತ್ಪನ್ನಗಳನ್ನು ಭಾರತ ಸರ್ಕಾರದ ಯೋಜನೆಗಳ ಒಮ್ಮುಖದ ಮೂಲಕ, ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಅಂತಿಮ ಗುರಿಯೊಂದಿಗೆ ಕ್ಲಸ್ಟರ್ ವಿಧಾನದಲ್ಲಿ ಪ್ರಚಾರ ಮಾಡಲಾಗುತ್ತದೆ.
ಗುರುತಿಸಲಾದ ಉತ್ಪನ್ನಗಳನ್ನು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಪಿಎಂ ಫಾರ್ಮಲೈಸೇಶನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ (ಪಿಎಂ-ಎಫ್ಎಂಇ) ಯೋಜನೆಯಡಿ ಬೆಂಬಲಿಸಲಾಗುತ್ತದೆ, ಇದು ಪ್ರವರ್ತಕರು ಮತ್ತು ಸೂಕ್ಷ್ಮ ಉದ್ಯಮಗಳಿಗೆ ಪ್ರೋತ್ಸಾಹವನ್ನು ನೀಡುತ್ತದೆ.
ಅನೇಕ ಉತ್ಪನ್ನಗಳು ಸಂಪನ್ಮೂಲಗಳ ಒಮ್ಮುಖ ಮತ್ತು ಇತರ ಇಲಾಖೆಗಳ ವಿಧಾನವನ್ನು ಸಹ ಒಳಗೊಂಡಿವೆ. ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಒಡಿಒಎಫ್ಪಿಯನ್ನು ತನ್ನ ಪ್ರಸ್ತುತ ಕೇಂದ್ರ ಪ್ರಾಯೋಜಿತ ಯೋಜನೆಗಳಾದ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ (ಮಿಡ್), ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ (ಎನ್ಎಫ್ಎಸ್ಎಂ), ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ (ಆರ್ಕೆವಿವೈ), ಪರಂಪರಾಗತ್ ಕೃಷಿ ವಿಕಾಸ್ ಯೋಜನೆ ಮೂಲಕ ಬೆಂಬಲಿಸಲಿದೆ.
ರಾಜ್ಯ ಸರ್ಕಾರಗಳು ಒನ್ ಡಿಸ್ಟ್ರಿಕ್ಟ್, ಒನ್ ಫೋಕಸ್ ಪ್ರೊಡಕ್ಟ್ ಅನುಷ್ಠಾನಗೊಳಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಮತ್ತು ಮೌಲ್ಯವರ್ಧನೆಯ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ತರುವಾಯ ಕೃಷಿ ರಫ್ತು ಹೆಚ್ಚಿಸಲು ಬೆಂಬಲ ಸಿಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.