ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ)ಯು ಮೂರು ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ವಿವಿಧ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಬಂಡವಾಳ ಸ್ವಾಧೀನ ಪ್ರಸ್ತಾಪಗಳಿಗೆ ಮಂಗಳವಾರ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟಾರೆ 13,700 ಕೋಟಿ ರೂಪಾಯಿ ವೆಚ್ಚದ ಮೂರು ಸ್ವೀಕಾರ ಅಗತ್ಯತೆಗಳಿಗೆ (Acceptance of Necessities (AoNs)) ಅನುಮೋದನೆ ನೀಡಲಾಯಿತು.
ಈ ಎಲ್ಲಾ ಸ್ವೀಕಾರ ಅಗತ್ಯತೆಗಳು ರಕ್ಷಣಾ ಸ್ವಾಧೀನದ ಹೆಚ್ಚಿನ ಆದ್ಯತೆಯ ವಿಭಾಗದಲ್ಲಿವೆ. ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ, ಅಭಿವೃದ್ಧಿಪಡಿಸಲಾದ ಮತ್ತು ತಯಾರಿಸಲಾದವುಗಳಿಗೆ ಆದ್ಯತೆ ನೀಡಲಾಗಿದೆ.
ಈ ಎಲ್ಲಾ ಸ್ವಾಧೀನ ಪ್ರಸ್ತಾಪಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗುತ್ತದೆ, ಅಭಿವೃದ್ಧಿಪಡಿಸಲಾಗುತ್ತದೆ ಮತ್ತು ತಯಾರಿಸಲಾಗುತ್ತದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಪರಿಕರ ಮತ್ತು ವ್ಯವಸ್ಥೆಗಳೂ ಇವುಗಳಲ್ಲಿ ಸೇರಿವೆ.
ಅನುಮೋದಿಸಿದ ಪ್ರಸ್ತಾಪಗಳಲ್ಲಿ ಭಾರತೀಯ ಸೈನ್ಯಕ್ಕಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್ (ಎಂಬಿಟಿ)ನ ಸುಧಾರಿತ ವರ್ಶನ್ ಅರ್ಜುನ್ ಮಾರ್ಕ್ 1 ಎ ಟ್ಯಾಂಕ್ಗಳ ಖರೀದಿ ಕೂಡ ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.