ನವದೆಹಲಿ: 100 ನೇ K -9 ವಜ್ರಾ-ಟಿ ಯನ್ನು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾನೆ ಅವರು ಆನಾವರಣಗೊಳಿಸಿದ್ದಾರೆ. ಸೂರತ್ ಹಝೀರದ ಲಾರ್ಸೆನ್ ಮತ್ತು ಟೌಬ್ರೊ (ಎಲ್ ಅಂಡ್ ಟಿ) ಡಿಫೆನ್ಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾರ್ಸೆನ್ ಮತ್ತು ಟೌಬ್ರೊ 100 ಸ್ಥಳೀಯವಾಗಿ ತಯಾರಿಸಿದ ಕೆ -9 ವಜ್ರಾ-ಟಿ 155 ಎಂಎಂ / 52 ಕ್ಯಾಲಿಬರ್ ಸ್ವಯಂ ಚಾಲಿತ ಬಂದೂಕುಗಳನ್ನು ಭಾರತೀಯ ಸೇನೆಗೆ ಪೂರೈಸಿದೆ. b
ವರದಿಯ ಪ್ರಕಾರ, ನರವಾನೆ ಹಝೀರಾ ಸೂರತ್ನ ಲಾರ್ಸೆನ್ ಮತ್ತು ಟೂಬ್ರೊ ಡಿಫೆನ್ಸ್ಗೆ ಭೇಟಿ ನೀಡಿ ಕೆ -9 ವಜ್ರಾ-ಟಿ ಯ ಮೊದಲ ಅನುಭವ ಪಡೆದುಕೊಂಡರು. ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರ ಭಾರತ್’ ಉತ್ತೇಜಿಸಲು ಲಾರ್ಸೆನ್ ಮತ್ತು ಟೌಬ್ರೊದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಕೆ & ವಜ್ರಾ-ಟಿ 155 ಎಂಎಂ / 52 ಕ್ಯಾಲಿಬರ್ ಟ್ರ್ಯಾಕ್ ಸ್ವಯಂ ಚಾಲಿತ ಗನ್ ವ್ಯವಸ್ಥೆಗಳನ್ನು ತಯಾರಿಸಿ 42 ತಿಂಗಳಲ್ಲಿ ಭಾರತೀಯ ಸೇನೆಗೆ ಪೂರೈಸುವ ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿನ ಕಾಂಟ್ರಾಕ್ಟ್ ಅನ್ನು ಎಲ್ ಆ್ಯಂಡ್ ಟಿ 4,500 ಕೋಟಿ ರೂ.ಗೆ ಗೆದ್ದುಕೊಂಡಿತು.
ಕೆ -9 ವಜ್ರಾ-ಟಿ ಟ್ರ್ಯಾಕ್ ಮಾಡಲಾದ, ಸ್ವಯಂ ಚಾಲಿತ ಹೋವಿಟ್ಜರ್ ಆಗಿದೆ. ಇದು 50 ಟನ್ ತೂಕವಿರುತ್ತದೆ ಮತ್ತು 43 ಕಿಲೋಮೀಟರ್ ದೂರದ ಗುರಿಗಳಲ್ಲಿ 47 ಕೆಜಿ ಬಾಂಬುಗಳನ್ನು ಹಾರಿಸಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.