ನವದೆಹಲಿ: ಆರೋಗ್ಯ ರಕ್ಷಣೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ -19 ವ್ಯಾಕ್ಸಿನೇಷನ್ ನೀಡುವಲ್ಲಿ ಭಾರತ ಮಹತ್ವದ ಸಾಧನೆಯನ್ನು ಮಾಡುತ್ತಿದೆ. ನಿನ್ನೆಗೆ ಭಾರತದಲ್ಲಿ ನೀಡಲಾದ ಒಟ್ಟು ಲಸಿಕೆ ಡೋಸ್ 88.5 ಲಕ್ಷ ದಾಟಿದೆ.
ಒಟ್ಟಾರೆಯಾಗಿ ದೇಶದಲ್ಲಿ 88 ಲಕ್ಷ 57 ಸಾವಿರ 341 ಲಸಿಕೆ ಡೋಸ್ ಅನ್ನು ಒಂದು ಲಕ್ಷ 90 ಸಾವಿರ 665 ಸೆಪನ್ಸ್ ಮೂಲಕ ಸಂಜೆ 6 ಗಂಟೆಯವರೆಗೆ ನೀಡಲಾಗಿದೆ. ಇದರಲ್ಲಿ ಮೊದಲ ಡೋಸ್ ತೆಗೆದುಕೊಂಡವರು 61 ಲಕ್ಷ 29 ಸಾವಿರ 745 ಆರೋಗ್ಯ ಕಾರ್ಯಕರ್ತರು ಮತ್ತು ಎರಡನೇ ಡೋಸ್ ತೆಗೆದುಕೊಂಡವರು ಎರಡು ಲಕ್ಷ 16 ಸಾವಿರ 339 ಆರೋಗ್ಯ ಕಾರ್ಯಕರ್ತರು, 25 ಲಕ್ಷ 11 ಸಾವಿರ 257 ಮುಂಚೂಣಿ ಕಾರ್ಮಿಕರು.
ಕಳೆದ 24 ಗಂಟೆಗಳಲ್ಲಿ 11 ಸಾವಿರದ ಕ್ಕೂ800 ಹೆಚ್ಚು ಜನರ ಚೇತರಿಕೆಯೊಂದಿಗೆ ದೇಶದ ಕೋವಿಡ್-19 ಚೇತರಿಕೆ ಪ್ರಮಾಣವು ಶೇಕಡಾ 97.32 ಕ್ಕೆ ಸುಧಾರಿಸಿದೆ.
ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ ಸಕ್ರಿಯ ಪ್ರಕರಣಗಳು 1.40 ಲಕ್ಷಕ್ಕಿಂತ ಕಡಿಮೆ ಇದೆ. ಭಾರತದಲ್ಲಿ ಕಳೆದ ಏಳು ದಿನಗಳಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 56 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು. ಲಡಾಖ್, ಜಾರ್ಖಂಡ್, ಅಸ್ಸಾಂ, ಉತ್ತರ ಪ್ರದೇಶ, ತೆಲಂಗಾಣ, ತ್ರಿಪುರ, ಗುಜರಾತ್ ಮತ್ತು ಗೋವಾ ಗಳು ಆರೋಗ್ಯ ಕಾರ್ಯಕರ್ತರಲ್ಲಿ ಶೇಕಡಾ 60 ಕ್ಕೂ ಹೆಚ್ಚು ಜನರಿಗೆ ಲಸಿಕೆಯ ಎರಡನೇ ಡೋಸ್ ನೀಡಿದೆ ಎಂದಿದ್ದಾರೆ.
ನೀತಿ ಆಯೋಗ ಸದಸ್ಯ (ಆರೋಗ್ಯ) ಸದಸ್ಯ ಡಾ. ವಿ.ಕೆ.ಪಾಲ್ ಮಾತನಾಡಿ, ಈವರೆಗೆ 24 ದೇಶಗಳಿಗೆ ಭಾರತದಿಂದ ಕೋವಿಡ್-19 ಲಸಿಕೆ ಕಳುಹಿಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.