ಪುಣೆ: ಭಾರತದಲ್ಲಿ ನಡೆಯುತ್ತಿರುವ ನೂತನ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಬಗ್ಗೆ ಸ್ವೀಡಿಶ್ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರು ಹಂಚಿಕೊಂಡ ಟೂಲ್ ಕಿಟ್ ಬಗೆಗಿನ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದ ಸ್ಟ್ರಿಂಗ್ ವಿಡಿಯೋ ಅನ್ನು ಯೂಟ್ಯೂಬ್ ತನ್ನ ವೇದಿಕೆಯಿಂದ ತೆಗೆದುಹಾಕಿದೆ.
ಯೂಟ್ಯೂಬ್ನ ಈ ಕೃತ್ಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಧಕ್ಕೆ ಅಲ್ಲವೇ? ಎಂಬ ಪ್ರಶ್ನೆಯನ್ನು ಮೂಡಿಸಿದೆ.
ಸ್ಟ್ರಿಂಗ್ ಬಿಡುಗಡೆ ಮಾಡಿದ ಈ ವಿಡಿಯೋ ‘ಧ್ರುವ್ ರಾಥಿ, ಜುಬೇರ್, ಬರ್ಖಾ ಅವರನ್ನು ಬಂಧಿಸಿ!’ ಎನ್ನುವ ಶೀರ್ಷಿಕೆಯನ್ನು ಒಳಗೊಂಡಿತ್ತು.
ಸ್ಟ್ರಿಂಗ್ ರಿವೀಲ್ಸ್ ಕಾರ್ಯಕ್ರಮದ ನಿರೂಪಕ ವಿನೋದ್ ಅವರು ಇಂದು ಬೆಳಿಗ್ಗೆ ಟ್ವೀಟ್ ಮಾಡಿ, “ನಮ್ಮ ಇತ್ತೀಚಿನ ಎಕ್ಸ್ಪೋಸ್ ವಿಡಿಯೋವನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿದೆ !!. ಅವರು ಸತ್ಯದ ಬಗ್ಗೆ ಭಯಭೀತರಾಗುವುದೇ ಈ ನಿರ್ಧಾರಕ್ಕೆ ಕಾರಣ” ಎಂದು ಅವರು ಹೇಳಿದ್ದಾರೆ.
SHOCKING !!!@YouTubeCreators @YouTube REMOVED our latest expose video from youtube !! @PMOIndia @HMOIndia @dir_ed @NIA_India
note-@SwarajyaMag @OpIndia_com @republic
— The String (@StringReveals) February 11, 2021
ವಿಡಿಯೋದಲ್ಲಿ ವಿನೋದ್ ಕುಮಾರ್ ಅವರು, ಜಾರ್ಜ್ ಸೊರೊಸ್, ಕೆಲವು ಭಾರತದ ಮಾಧ್ಯಮ ಸಂಸ್ಥೆಗಳು ಮತ್ತು ಕೆಲವು ಕಾರ್ಯಕರ್ತರಿಂದ ಧನಸಹಾಯ ಪಡೆದ ಸಂಸ್ಥೆಗಳ ಕುತಂತ್ರ ಮತ್ತು ‘ರೈತರ ಪ್ರತಿಭಟನೆಯ ಕುರಿತು ದೇಶದ ಒಳಗೆ ಮತ್ತು ಹೊರಗೆ ಸಂಘಟಿತ ಸಾಮಾಜಿಕ ಮಾಧ್ಯಮ ಪ್ರಚಾರವನ್ನು ಹೇಗೆ ಇದರ ಸಹಾಯದಿಂದ ಮಾಡಲಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
ದಿ ವೈರ್, ಸ್ಕ್ರಾಲ್, ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್, ನ್ಯೂಸ್ಲಾಂಡ್ರಿ, ಆಲ್ಟ್ ನ್ಯೂಸ್ನಂತಹ ಮಾಧ್ಯಮ ಘಟಕಗಳ ಸಂಘವಾದ DIGIPUB ಮತ್ತು ಈ ಮಾಧ್ಯಮ ಘಟಕಗಳು ಮತ್ತು ಅದರ ಸಂಬಂಧಿತ ಪತ್ರಕರ್ತರು ಗ್ರೇಟಾ ಅವರ ಭಾರತ ವಿರೋಧಿ ಪ್ರಚಾರದ ಭಾಗವಾಗಿದ್ದ ಟೂಲ್ ಕಿಟ್ನಲ್ಲಿ ಹೇಗೆ ಉಲ್ಲೇಖಿಸಲ್ಪಟ್ಟಿದ್ದಾರೆ ಎಂಬುದರ ಬಗ್ಗೆ ಅದು ಬೆಳಕು ಚೆಲ್ಲಿದೆ.
ವಿಡಿಯೋವನ್ನು ಸಾಮೂಹಿಕವಾಗಿ ವರದಿ ಮಾಡಲಾಗಿದೆ ಮತ್ತು ವಿಡಿಯೋವನ್ನು ತೆಗೆದುಹಾಕಲಾದ ಬಗ್ಗೆ ಚಾನಲ್ ಈಗ ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಲಾಗುತ್ತಿದೆ.
ವಿಡಿಯೋವನ್ನು ತೆಗೆದುಹಾಕಲು ವಿವರವಾದ ಸ್ಪಷ್ಟೀಕರಣವನ್ನು ಕೋರಿ ಸ್ಟ್ರಿಂಗ್ ಯೂಟ್ಯೂಬ್ ಪ್ರಧಾನ ಕಚೇರಿಗೆ ಮನವಿ ಮಾಡಿದೆ.
ಯೂಟ್ಯೂಬ್ನಲ್ಲಿ ವಿಡಿಯೋವನ್ನು ತೆಗೆದು ಹಾಕಲಾಗಿದ್ದರೂ, ವಿವಿಧ ಚಾನಲ್ಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಆ ಲಿಂಕ್ಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.