ನವದೆಹಲಿ: ಕೇಂದ್ರ ರೈಲ್ವೆ ನೇಮಕಾತಿ ಘಟಕವು ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ ಮತ್ತು ಈ ನಿಟ್ಟಿನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಒಟ್ಟು 2532 ಖಾಲಿ ಹುದ್ದೆಗಳು ಲಭ್ಯವಿದ್ದು, ಇದಕ್ಕಾಗಿ ಆನ್ಲೈನ್ ಅರ್ಜಿಗಳನ್ನು ಫೆಬ್ರವರಿ 6, 2021 ರಿಂದ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೇಂದ್ರ ರೈಲ್ವೆ ಅಪ್ರೆಂಟಿಸ್ ನೇಮಕಾತಿ 2021 ಗೆ ಮಾರ್ಚ್ 5, 2021 ರಂದು ಅಥವಾ ಮೊದಲು ಆರ್ಆರ್ಸಿ ಅಧಿಕೃತ ವೆಬ್ಸೈಟ್ RRC – rrccr.com ಅಲ್ಲಿ ಅರ್ಜಿ ಸಲ್ಲಿಸಬಹುದು.
ಕೇಂದ್ರ ರೈಲ್ವೆ ನೇಮಕಾತಿ ಘಟಕವು, ಮುಂಬೈ, ಪುಣೆ, ನಾಗ್ಪುರ ಸೋಲಾಪುರ ಮತ್ತು ಭೂಸಾವಲ್ ಸೇರಿದಂತೆ ವಿವಿಧ ಸ್ಥಳಗಳಿಗೆ 2532 ಖಾಲಿ ಹುದ್ದೆಗಳನ್ನು ಹೊಂದಿದೆ. ಕ್ಯಾರೇಜ್ ಮತ್ತು ವ್ಯಾಗನ್, ಪ್ಯಾರೆಲ್ ವರ್ಕ್ಶಾಪ್, ಮುಂಬೈ ಕಲ್ಯಾಣ್ ಡೀಸೆಲ್ ಶೆಡ್, ಮನ್ಮಾದ್ ವರ್ಕ್ಶಾಪ್ ಮುಂತಾದ ವಿವಿಧ ಘಟಕಗಳ ಅಡಿಯಲ್ಲಿ ಖಾಲಿ ಹುದ್ದೆಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.