ನವದೆಹಲಿ: ಕೋವಿಡ್-19 ಲಸಿಕೆಯನ್ನು ಪೂರೈಕೆ ಮಾಡಿದ ಭಾರತಕ್ಕೆ ಬ್ರೆಝಿಲ್ ಅತ್ಯಂತ ವಿಭಿನ್ನ ರೀತಿಯಲ್ಲಿ ಧನ್ಯವಾದವನ್ನು ಅರ್ಪಣೆ ಮಾಡಿದೆ. ಬ್ರೆಝಿಲ್ ಪ್ರಧಾನಿ ಬೋಲ್ಸನಾರೋ ಅವರು ಸಂಜೀವಿನಿ ಪರ್ವತ ಹೊತ್ತ ಹನುಂತನ ಚಿತ್ರವನ್ನು ಟ್ವಿಟ್ ಮಾಡಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
“ನಮಸ್ಕಾರ, ಪ್ರಧಾನಿ ನರೇಂದ್ರ ಮೋದಿ! ಒಟ್ಟುಗೂಡಿದ ಪ್ರಯತ್ನಗಳ ಮೂಲಕ ಜಾಗತಿಕ ಅಡಚಣೆಯನ್ನು ನಿವಾರಿಸಲು ಉತ್ತಮ ಪಾಲುದಾರರಾಗಿರುವುದಕ್ಕೆ ಬ್ರೆಝಿಲ್ ಗೌರವಪಡುತ್ತದೆ. ಭಾರತದಿಂದ ಬ್ರೆಜಿಲ್ಗೆ ಲಸಿಕೆ ರಫ್ತು ಮಾಡಲು ನಮಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಧನ್ಯವಾದ್!” ಎಂದು ಬೋಲ್ಸನಾರೊ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವಿಟ್ ಮಾಡಿರುವ ಮೋದಿ, “ಗೌರವ ನಮ್ಮದು, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಒಟ್ಟಾಗಿ ಹೋರಾಡುವಲ್ಲಿ ಬ್ರೆಝಿಲ್ ವಿಶ್ವಾಸಾರ್ಹ ಪಾಲುದಾರ. ಆರೋಗ್ಯ ರಕ್ಷಣೆಯಲ್ಲಿ ನಮ್ಮ ಸಹಕಾರವನ್ನು ಬಲಪಡಿಸುವುದನ್ನು ನಾವು ಮುಂದುವರಿಸುತ್ತೇವೆ” ಎಂದಿದ್ದಾರೆ.
ಭಾರತವು ಶುಕ್ರವಾರ ಎರಡು ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ಬ್ರೆಝಿಲ್ಗೆ ರವಾನಿಸಿದೆ. ಕೋವಿಶೀಲ್ಡ್ ಅನ್ನು ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ. ಜೈರ್ ಬೋಲ್ಸನಾರೊ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಜನವರಿ 8 ರಂದು ಬರೆದ ಪತ್ರವನ್ನು ಅನುಸರಿಸಿ, ಬ್ರೆಝಿಲ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನವದೆಹಲಿಯ ರಾಯಭಾರ ಕಚೇರಿಯ ಮೂಲಕ, ಕೋವಿಡ್ -19 ಲಸಿಕೆಗಳನ್ನು ಸಾಗಿಸಲು ಭಾರತ ಮತ್ತು ಎಸ್ಐಐ ಜೊತೆ ವ್ಯವಸ್ಥೆ ಮಾಡಿಕೊಂಡಿತ್ತು.
The honour is ours, President @jairbolsonaro to be a trusted partner of Brazil in fighting the Covid-19 pandemic together. We will continue to strengthen our cooperation on healthcare. https://t.co/0iHTO05PoM
— Narendra Modi (@narendramodi) January 23, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.