ನವದೆಹಲಿ: ಭಾರತ್ ಬಯೋಟೆಕ್ನ ಕೋವಿಡ್ -19 ಲಸಿಕೆ ಕೊವಾಕ್ಸಿನ್ ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ಲಸಿಕೆಯ ಹಂತ -1 ಪ್ರಯೋಗಗಳಲ್ಲಿ ಭಾಗವಹಿಸಿದವರಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ಹೇಳಿದೆ.
ಲಸಿಕೆ ಸಹಿಸಬಲ್ಲಂತಹ ಸುರಕ್ಷತಾ ಫಲಿತಾಂಶಗಳನ್ನು ಉಂಟುಮಾಡಿದೆ ಮತ್ತು ರೋಗನಿರೋಧಕ ಪ್ರತಿಕ್ರಿಯೆಗಳನ್ನು ಹೆಚ್ಚಿಸಿದೆ ಎಂದು ವೈದ್ಯಕೀಯ ಜರ್ನಲ್ ಹೇಳಿದೆ.
ಲ್ಯಾನ್ಸೆಟ್ ಪ್ರಕಾರ, ಎಲ್ಲಾ ಅಡ್ಡಿ ಪರಿಣಾ ಘಟನೆಗಳು ಸಣ್ಣ ಮತ್ತು ಮಧ್ಯಮ ಮತ್ತು ಮೊದಲ ಡೋಸ್ ನಂತರ ಹೆಚ್ಚಾಗಿ ಸಂಭವಿಸುತ್ತಿವೆ.
ಒಂದು ಅಡ್ಡ ಪರಿಣಾಮ ಘಟನೆ ವರದಿಯಾಗಿದೆ ಆದರೆ ಲಸಿಕೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಅದು ಹೇಳಿದೆ.
“ಇಂಜೆಕ್ಷನ್ ನೀಡಿದ ಭಾಗದಲ್ಲಿ ನೋವು, ತಲೆನೋವು, ಆಯಾಸ, ಜ್ವರ ಮತ್ತು ವಾಕರಿಕೆ ಅಥವಾ ವಾಂತಿ ಸಾಮಾನ್ಯ ಅಡ್ಡ ಪರಿಣಾಮ ಘಟನೆಗಳು” ಎಂದು ಜರ್ನಲ್ ಹೇಳಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಕೋವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ ಮತ್ತು ತುರ್ತು ಬಳಕೆಗಾಗಿ ಡಿಸಿಜಿಐ ಅನುಮೋದನೆ ಪಡೆದ ನಂತರ ಲಸಿಕೆಯನ್ನು ಪ್ರಸ್ತುತ ಭಾರತದ ಕೋವಿಡ್ -19 ಇಮ್ಯುನೈಸೇಶನ್ ಡ್ರೈವ್ನಲ್ಲಿ ಬಳಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.